ತನ್ನ ತಂದೆಯ ಕೈಗಳನ್ನೇ ಕಡಿದ 17 ವರ್ಷ ವಯಸ್ಸಿನ ತೈವಾನಿನ ಬಾಲಕನನ್ನು ಬಂಧಿಸಲಾಗಿದೆಯೆಂದು ವರದಿಯಾಗಿದೆ. ಸುಮಾರು ವರ್ಷಗಳವರೆಗೆ ತಮ್ಮ ತಂದೆ ದೈಹಿಕ ದೌರ್ಜನ್ಯ ನಡೆಸಿದ್ದರಿಂದ ಪ್ರತೀಕಾರ ತೀರಿಸಿಕೊಳ್ಳಲು ಈ ದುಷ್ಕೃತ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ. ಕೇಂದ್ರ ಮಿಯೋಲಿಯ ಕುಟುಂಬದ ಮನೆಯಲ್ಲಿ ನಿದ್ರಾವಸ್ಥೆಯಲ್ಲಿದ್ದ ತನ್ನ ತಂದೆಯ ಕೈಗಳನ್ನು ಬಾಲಕ ಚಾಕುವಿನಿಂದ ಕತ್ತರಿಸಿದನೆಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯರು 37 ವರ್ಷ ವಯಸ್ಸಿನ ವಿಚ್ಛೇದಿತ ಅಕ್ಕಸಾಲಿಗನ ಕೈಗಳನ್ನು ಪುನಃ ಜೋಡಿಸಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ. ತಂದೆಯ ಕೈಗಳನ್ನು ಕಡಿದಿದ್ದಾಗಿ ಬಾಲಕ ಒಪ್ಪಿಕೊಂಡಿದ್ದು ತನ್ನ ದುಷ್ಕೃತ್ಯಕ್ಕೆ ಯಾವುದೇ ರೀತಿಯ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಶಾಲೆಯಲ್ಲಿ ಕಲಿಯುವಾಗ ಕೆಲಸ ತೆಗೆಸಿಕೊಡಲು ನಿರಾಕರಿಸಿದ ತಂದೆ ತನಗೆ ಥಳಿಸಿದರೆಂದು ಬಾಲಕ ದೂರಿದ್ದಾನೆ.
ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಬಾಲಕನನ್ನು ಹಸ್ತಾಂತರಿಸಲಾಗಿದ್ದು, ಬಾಲಕನ ಮೇಲೆ ಆರೋಪಗಳನ್ನು ಹೊರಿಸುವ ಬಗ್ಗೆ ಕೋರ್ಟ್ ನಿರ್ಧರಿಸಲಿದೆ. ತಂದೆ ಮತ್ತು ಮಗನನ್ನು ಫ್ಯಾನ್ ಎಂಬ ಕುಲನಾಮದಿಂದ ಗುರುತಿಸಲಾಗಿದೆ.