ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಣ್ವಸ್ತ್ರ ಸಮರ ತಡೆಗೆ ವಿಮಾನವೇರಲಿದ್ದ ಕ್ಲಿಂಟನ್ (Kargil war | Clinton | Pakistan | Nuclear)
 
PTI
PTI
1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತ-ಪಾಕಿಸ್ತಾನದ ನಡುವೆ ಪೂರ್ಣ ಸ್ವರೂಪದ ಅಣ್ವಸ್ತ್ರ ಯುದ್ಧವಾಗಿ ಪರಿವರ್ತನೆಯಾಗುವುದನ್ನು ತಪ್ಪಿಸಲು ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ವಿಮಾನದಲ್ಲಿ ಹಾರಲು ಕೂಡ ಸಿದ್ದರಿದ್ದರೆಂದು ಮಂಗಳವಾರ ಬಿಡುಗಡೆಯಾದ ಪುಸ್ತಕವೊಂದು ತಿಳಿಸಿದೆ. ಮಿಲಿಟರಿ ಸೋಲಿನ ಭಯದಲ್ಲಿ ಪಾಕಿಸ್ತಾನ ಬಹುತೇಕ ಅಣ್ವಸ್ತ್ರ ದಾಳಿಗೆ ಸ್ವತಃ ಸಿದ್ಧತೆ ನಡೆಸಿತ್ತೆಂದು ಪುಸ್ತಕದಲ್ಲಿ ಬರೆಯಲಾಗಿದೆ.

ಪಾಕಿಸ್ತಾನವು ಭಾರತದ ಜತೆ ಉದ್ವಿಗ್ನತೆ ಹೆಚ್ಚಿಸುವ ಕಾರ್ಯತಂತ್ರವಾಗಿ ನಿಯಂತ್ರಣ ರೇಖೆಯಾಚೆ ತನ್ನ ಸೈನಿಕರನ್ನು ನುಸುಳಿಸಿ ಅಂತಾರಾಷ್ಟ್ರೀಯ ಗಮನ ಸೆಳೆಯಲು ಪಾಕಿಸ್ತಾನ ಬಯಸಿತ್ತೆಂದು ಕ್ಲಿಂಟನ್ ತಮಗೆ ತಿಳಿಸಿದ್ದಾಗಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕ ಮತ್ತು ಇತಿಹಾಸಜ್ಞ ಟೈಲರ್ ಬ್ರಾಂಚ್ ತಿಳಿಸಿದ್ದಾರೆ.ಕಾಶ್ಮೀರದಲ್ಲಿ ಸಂಘರ್ಷ ಅತ್ಯಂತ ಗಂಭೀರವಾಗಿದೆಯೆಂದು ಕ್ಲಿಂಟನ್ ಹೇಳಿ ತಮ್ಮನ್ನು ಚಕಿತಗೊಳಿಸಿದ್ದಾಗಿ ಬ್ರಾಂಚ್ ತಮ್ಮ 700 ಪುಟಗಳ 'ಕ್ಲಿಂಟನ್ ಟೇಪ್ಸ್: ವ್ರೆಸ್ಲಿಂಗ್ ಹಿಸ್ಟರಿ ವಿತ್ ಪ್ರೆಸಿಡೆಂಟ್' ಶೀರ್ಷಿಕೆಯ ಪುಸ್ತಕದಲ್ಲಿ ಬರೆದಿದ್ದಾರೆ.

ಅವರು(ಭಾರತ ಮತ್ತು ಪಾಕಿಸ್ತಾನ) ಇಂದು ರಾತ್ರಿ ಕರೆಮಾಡಿ, ಅಲ್ಲಿಗೆ ಹಾರುವ ಮ‌ೂಲಕ ಸಂಘರ್ಷ ತಪ್ಪಿಸಲು ಸಾಧ್ಯವೇ ಎಂದು ಕೇಳಿದ್ದರೆ, ತಮಗೆ ವಿಮಾನದಲ್ಲಿ ಹಾರದೇ ಗತ್ಯಂತರವಿರಲಿಲ್ಲವೆಂದು ಕ್ಲಿಂಟನ್ ಹೇಳಿದ್ದಾಗಿ ಕ್ಲಿಂಟನ್ ಮತ್ತು ಬ್ರಾಂಚ್ ನಡುವೆ ಗೋಪ್ಯ ಧ್ವನಿಮುದ್ರಿತ ಸಂಭಾಷಣೆಗಳ ಆಧಾರದ ಮೇಲೆ ಬರೆದ ಪುಸ್ತಕದಲ್ಲಿ ತಿಳಿಸಲಾಗಿದೆ.ಅಣ್ವಸ್ತ್ರ ಯುದ್ಧದ ಬೆದರಿಕೆಯೊಡ್ಡಿದ ಸಂಘರ್ಷವನ್ನು ಶಮನಗೊಳಿಸುವುದಕ್ಕಿಂತ ತಮಗೆ ಹೆಚ್ಚಿನ ಜವಾಬ್ದಾರಿ ಖಂಡಿತ ಇರಲಿಲ್ಲವೆಂದು ಕ್ಲಿಂಟನ್ ಪ್ರತಿಕ್ರಿಯಿಸಿದ್ದರು.

ಕೇವಲ ನಾಲ್ಕು ತಿಂಗಳ ಕೆಳಗೆ ಭಾರತ ಮತ್ತು ಪಾಕಿಸ್ತಾನ ಬಾಯ್ ಬಾಯ್ ಎನ್ನುತ್ತಾ ಶಾಂತಿ ಯಾತ್ರೆಯ ಮ‌ೂಲಕ ಚಕಿತಗೊಳಿಸಿ, ಪಂಜಾಬಿನ ಗಡಿಯ ಬಳಿಕ ಶಾಂತಿ ಮಾತುಕತೆಗೆ ಸಂಧಿಸಲು ರೈಲು ಮತ್ತು ಬಸ್ ಸಂಚಾರಕ್ಕೆ ಉಭಯ ರಾಷ್ಟ್ರಗಳ ನಾಯಕರು ಚಾಲನೆ ನೀಡಿದ್ದರು. ವಿಭಜನೆ ಬಳಿಕ ಮ‌ೂರು ಯುದ್ಧಗಳಲ್ಲಿ ಎರಡು ಯುದ್ಧಗಳಿಗೆ ಕಾರಣವಾದ ಕಾಶ್ಮೀರ ವಿವಾದಕ್ಕೆ ಅಂತಿಮ ತೆರೆಎಳೆಯಲು ಇಬ್ಬರೂ ಶಪಥ ತೊಟ್ಟಿದ್ದರು.

ಈ ಹೊಸ ಬಿಕ್ಕಟ್ಟಿನಿಂದ ಶಾಂತಿ ಮಾತುಕತೆಯ ಆಶಯವನ್ನು ಕಸಿದು ಭಯಕ್ಕೆ ತಿರುಗಿ ರಾಜಕೀಯ ಹೇಗೆ ಕ್ಷಿಪ್ರವಾಗಿ ಬದಲಾಗುತ್ತದೆಂದು ತೋರಿಸಿತ್ತು. ಮೇನಿಂದ ಪಾಕಿಸ್ತಾನವು ತನ್ನ ಮಿಲಿಟರಿ ಘಟಕಗಳನ್ನು ಕಾರ್ಗಿಲ್ 18,000 ಅಡಿ ಎತ್ತರದ ಶಿಖರಾಗ್ರಗಳ ಮೇಲೆ ನುಸುಳಿಸಿ ಕೆಳಗಿರುವ ಭಾರತದ ಚೌಕಿಗಳ ಮೇಲೆ ಶೆಲ್ ದಾಳಿ ಮಾಡಿದರೆಂದು ಬ್ರಾಂಚ್ ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಗಮನಸೆಳೆಯಲು ಪಾಕಿಸ್ತಾನದ ಶಕ್ತಿಗಳು ಯುದ್ಧದ ಕಾರ್ಯತಂತ್ರ ರೂಪಿಸಿ, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಮುಸ್ಲಿಂ ಬಹುಸಂಖ್ಯಾತರ ಬೇಡಿಕೆಗಳನ್ನು ಫಲಪ್ರದವಾಗಿಸುವ ಆಶಯ ಹೊಂದಿದ್ದರೆಂದು ಕ್ಲಿಂಟನ್ ಹೇಳಿಕೆ ಉಲ್ಲೇಖಿಸಿ ಪುಸ್ತಕದಲ್ಲಿ ಬರೆಯಲಾಗಿದೆ.

ಆದರೆ ಮಧ್ಯಸ್ಥಿಕೆ ವಿಫಲವಾದಾಗ, ಪಾಕಿಸ್ತಾನವು ಭಾರತದ ಸಾಂಪ್ರದಾಯಿಕ ಶಕ್ತಿಗಳಿಂದ ವಿನಾಶವನ್ನು ನಿವಾರಿಸಲು ಅಣ್ವಸ್ತ್ರ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡಿತು. ಭಾರತದ ಧಾರ್ಮಿಕನಿಷ್ಠರು ಕೂಡ ಪಾಕಿಸ್ತಾನದ ವಿರುದ್ಧ ಪ್ರತಿದಾಳಿಗೆ ಅಥವಾ ಕಾಶ್ಮೀರದ ಕಾನೂನುಬದ್ಧ ಆಡಳಿತ ದುರ್ಬಗೊಳಿಸುವ ಯಾವುದೇ ಕ್ರಮ ಪ್ರತಿರೋಧಿಸಲು ಸಿದ್ಧತೆ ನಡೆಸಿದ್ದರೆಂದು ಕ್ಲಿಂಟನ್ ಹೇಳಿಕೆ ಉಲ್ಲೇಖಿಸಿ ಬ್ರಾಂಚ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾರ್ಗಿಲ್, ಅಣ್ವಸ್ತ್ರ