ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್‌ನಲ್ಲಿ ಬರಾಕ್ ಒಬಾಮಾ ಹತ್ಯೆ ಬಗ್ಗೆ ಸಮೀಕ್ಷೆ ! (US President | Barack Obama | America | Al-Qaeda)
 
PTI
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹತ್ಯೆಗೈಯಬೇಕೆ?-ಹೀಗೊಂದು ಪ್ರಶ್ನೆ ದಿಢೀರನೆ ಕಾಣಿಸಿಕೊಂಡಿದ್ದು ಸೋಷಿಯಲ್ ನೆಟ್‌ವರ್ಕಿಂಗ್ ಅಂತರ್ಜಾಲ ತಾಣ 'ಫೇಸ್‌ಬುಕ್'ನಲ್ಲಿ!.

ಅನಾಮಿಕ ವ್ಯಕ್ತಿಯೊಬ್ಬ ಈ ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಒಬಾಮಾ ಹತ್ಯೆಯ ಕುರಿತು ಆರಂಭಿಸಿದ ಈ ಸಮೀಕ್ಷೆ ಕುರಿತು ಅಮೆರಿಕದ ರಹಸ್ಯ ಸೇವಾ ವಿಭಾಗ ತನಿಖೆ ಆರಂಭಿಸಿದೆ.

ಇಂತಹ ಸಮೀಕ್ಷೆಗೆ ಮುಂದಾಗಿರುವ ಖದೀಮನ ಪತ್ತೆಗೆ ಬಲೆ ಬೀಸಿರುವ ಅಮೆರಿಕದ ತನಿಖಾ ತಂಡ ತೀವ್ರ ಶೋಧ ನಡೆಸುತ್ತಿದೆ. ಈ ಮಧ್ಯೆ ಸಮೀಕ್ಷೆ ಆರಂಭಿಸಿದ ವ್ಯಕ್ತಿ ವೆಬ್‌ಸೈಟ್‌ಗೆ ಲಾಗಿನ್ ಆಗದಂತೆ ಆತನನ್ನು ಫೇಸ್‌ಬುಕ್ ನಿರ್ಬಂಧಿಸಿದೆ.

ಈಗಾಗಲೇ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪ್ರತಿನಿತ್ಯ 30ಬೆದರಿಕೆ ಕರೆಗಳು ಬರುತ್ತಿರುವುದಾಗಿಯೂ ಹಾಗೂ ಕೊಲೆ ಯತ್ನ ಪ್ರಯತ್ನಗಳ ವರದಿಯೊಂದಿಗೆ ಇದೀಗ ಒಬಾಮಾ ಹತ್ಯೆ ಕುರಿತ ಸಮೀಕ್ಷೆ ಮತ್ತೊಂದು ಸೇರ್ಪಡೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ