ಶಕ್ತಿಶಾಲಿ ಸಮುದ್ರಗರ್ಭದಲ್ಲಿ ಉಂಟಾದ ಭೂಕಂಪದಿಂದ ಹುಟ್ಟಿದ ಭೀಕರ ಸುನಾಮಿ ಅಲೆಗಳು ಸಾಮೋವ ಮತ್ತು ಅಮೆರಿಕನ್ ಸಾಮೋವ ದ್ವೀಪಗಳಿಗೆ ಅಪ್ಪಳಿಸಿದ್ದರಿಂದ ಗ್ರಾಮಗಳು ನೆಲಸಮವಾಗಿದ್ದು, ಸುಮಾರು 100 ಜನರನ್ನು ಬಲಿತೆಗೆದುಕೊಂಡಿದೆ. ಭೀಕರವಾದ, ರಾಕ್ಷಸೀ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಕಾರುಗಳು ಮತ್ತು ಜನರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋದರು.
ಬದುಕುಳಿದವರು ಎತ್ತರದ ಪ್ರದೇಶದಲ್ಲಿ ಗಂಟೆಗಟ್ಟಲೆ ನಿಂತು ಜೀವವುಳಿಸಿಕೊಂಡರು. ನಸುಕಿನಲ್ಲಿ 8.0 ಮತ್ತು 8.3 ತೀವ್ರತೆಯ ಭೂಕಂಪವು ಅಮೆರಿಕ ಸಮೋವದಿಂದ 190 ಕಿಮೀ ದೂರದ 32 ಕಿಮೀ ಆಳದ ಸಮುದ್ರಗರ್ಭದಲ್ಲಿ ಅಪ್ಪಳಿಸಿತು. ಸಾಮೋವದಿಂದ 200 ಕಿಮೀ ದೂರವಿರುವ ಅಮೆರಿಕ ಸಾಮೋಅ 65,000 ಜನರ ವಾಸಸ್ಥಳವಾಗಿದೆ.
ಜಲಗರ್ಭದಲ್ಲಿ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದ ಕೂಡಲೇ ಸುಮಾರು 15 ರಿಂದ 20 ಅಡಿ (ನಾಲ್ಕುವರೆಯಿಂದ 6 ಮೀಟರ್) ಎತ್ತರದ ಸುನಾಮಿ ಅಲೆಗಳು ತೀರದತ್ತ ಅಪ್ಪಳಿಸಿ 1.6 ಕಿಮೀ ಭೂಪ್ರದೇಶವನ್ನು ಆವರಿಸಿತು.
ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರವು ಅಮೆರಿಕದ ಸಾಮೋವದಿಂದ ಕಟ್ಟೆಚ್ಚರ ವಹಿಸುವಂತೆ ನ್ಯೂಜಿಲೆಂಡ್‌ಗೆ ಸೂಚಿಸಿದೆ. 4 ಮೀಟರ್ ಗಾತ್ರದ ಅಲೆಗಳಿಂದ ಟೊಂಗಾದ ತೀರಪ್ರದೇಶದಲ್ಲಿ ಕೂಡ ಹಾನಿ ಸಂಭವಿಸಿದೆ. ಸಾಮೋವಅ ಗ್ರಾಮದ ತಲಾಮೋವ ಗ್ರಾಮದಲ್ಲಿ ಅನೇಕ ಸಾವುನೋವುಗಳು ಸಂಭವಿಸಿವೆ.