ನ್ಯೂಯಾರ್ಕ್, ಬುಧವಾರ, 30 ಸೆಪ್ಟೆಂಬರ್ 2009( 12:16 IST )
ಮುಂಬೈ ಭಯೋತ್ಪಾದನೆ ದಾಳಿಗಳ ಸೂತ್ರಧಾರಿಯಾದ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರೆ ತೊಯ್ಬಾ ಭಾರತದ ಮೇಲೆ ಮತ್ತೊಮ್ಮೆ ದಾಳಿಗೆ ಯೋಜಿಸಿದೆಯೆಂದು ಗುಪ್ತಚರ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಅಮೆರಿಕದ ಮಾಧ್ಯಮ ವರದಿ ತಿಳಿಸಿದೆ.
ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಸಂಘಟನೆಗಳನ್ನು ನಾಶ ಮಾಡುವುದಾಗಿ ಪಾಕಿಸ್ತಾನದ ಆಶ್ವಾಸನೆ ಮತ್ತು ಕೆಲವು ಲಷ್ಕರೆ ಕಾರ್ಯಕರ್ತರ ಬಂಧನದ ಬಳಿಕವೂ, ಲಷ್ಕರೆ ತೊಯ್ಬಾ ಮತ್ತೆ ಚಿಗುರಿಕೊಂಡಿದೆಯೆಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.
ಮುಂಬೈ ತನಿಖೆಗಳ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ದಾಖಲೆಗಳ ಪ್ರತಿಗಳು ಅಮೆರಿಕದ ಪತ್ರಿಕೆಯ ಬಳಿಯಿದ್ದು, ಪಾಕಿಸ್ತಾನದಲ್ಲಿ ಆವರಿಸಿರುವ ಲಷ್ಕರೆ ಜಾಲದ ಕಾರ್ಯಾಚರಣೆಯ ಬಗ್ಗೆ ವಿವರವಾದ ಚಿತ್ರಗಳನ್ನು ಒದಗಿಸಿದೆ. ಕರಾಚಿಯಲ್ಲಿ ದಾಳಿ ಸಿದ್ಧತೆಗೆ ಬಳಸಿದ ನಾಲ್ಕು ಮನೆಗಳು ಮತ್ತು ಎರಡು ತರಬೇತಿ ಶಿಬಿರಗಳು ಇವುಗಳಲ್ಲಿ ಸೇರಿವೆ.