ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿಗೆ ಲಷ್ಕರೆ ಸಂಚು: ಪಾಕ್ ತನಿಖೆ ದೃಢ (Lashkar | Washington | Mumbai | Terrorists)
 
PTI
PTI
26/11 ಭಯೋತ್ಪಾದನೆ ದಾಳಿ ಕುರಿತು ಪಾಕಿಸ್ತಾನ ಸ್ವತಃ ನಡೆಸಿದ ತನಿಖೆಯಲ್ಲಿ ಹತ್ಯಾಕಾಂಡವನ್ನು ನಡೆಸಿದವರು ಲಷ್ಕರೆ ತೊಯ್ಬಾ ಭಯೋತ್ಪಾದನೆ ಸಂಘಟನೆಗೆ ಸೇರಿದ ಭಯೋತ್ಪಾದಕರು ಎನ್ನುವುದರಲ್ಲಿ ಲವಲೇಶವೂ ಸಂಶಯವಿಲ್ಲ ಎನ್ನುವುದು ದೃಢಪಟ್ಟಿದೆಯೆಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.

ಭಯೋತ್ಪಾದನೆ ಸಂಘಟಕರಲ್ಲಿ ಹೋಮಿಯೋಪಥಿ ಔಷಧಿ ತಜ್ಞ ಹಮದ್ ಅಮಿನ್ ಸಾದಿಖ್ ಕೂಡ ಸೇರಿದ್ದು, ಬ್ಯಾಂಕ್ ಖಾತೆಗಳನ್ನು ಮತ್ತು ಸರಬರಾಜು ವ್ಯವಸ್ಥೆ ಮಾಡಿದ್ದನೆಂದು ಪಾಕಿಸ್ತಾನದ ತನಿಖಾ ದಾಖಲೆಯಲ್ಲಿ ತಿಳಿಸಿದೆ. ಮುಂಬೈ ತನಿಖೆ ಕುರಿತು ಪಾಕಿಸ್ತಾನ ಮತ್ತು ಭಾರತದ ಕಡತಗಳಲ್ಲಿ ಪಾಕಿಸ್ತಾನದಲ್ಲಿ ವ್ಯಾಪಿಸಿದ್ದ ಲಷ್ಕರೆ ತೊಯ್ಬಾ ಜಾಲದ ಕಾರ್ಯಾಚರಣೆ ಬಗ್ಗೆ ವಿವರವಾದ ಚಿತ್ರಣವನ್ನು ನೀಡಿದೆ.26/11 ದಾಳಿಗೆ ಸಿದ್ಧತೆ ನಡೆಸಲು ಕರಾಚಿಯಲ್ಲಿ ನಾಲ್ಕು ಮನೆಗಳು ಮತ್ತು ಎರಡು ತರಬೇತಿ ಶಿಬಿರಗಳನ್ನು ಬಳಸಲಾಯಿತು.

ಬದುಕುಳಿದ ಏಕೈಕ ದಾಳಿಕೋರನ ಸಾಕ್ಷ್ಯದ ಪ್ರಕಾರ, ಅಜ್ಮಲ್ ಅಮಿರ್ ಕಸಬ್‌‍ನನ್ನು ಲಷ್ಕರೆ ನೇಮಿಸಿಕೊಂಡು ಪಾಕಿಸ್ತಾನ ನಿಯಂತ್ರಿತ ಕಾಶ್ಮೀರದ ಮುಜಫರಾಬಾದ್‌ ಮತ್ತು ವಾಯವ್ಯ ಪ್ರಾಂತ್ಯದ ಮನ್ಶೇರಾದ ಸುಸ್ಥಾಪಿತ ಶಿಬಿರಗಳಲ್ಲಿ ಅವನಿಗೆ ತರಬೇತಿ ನೀಡಲಾಗಿತ್ತು.ಮುಂಬೈ ದಾಳಿಗೆ ಆಯ್ಕೆಯಾದ ಮುಖ್ಯ ಗುಂಪಿನ 10 ಜನರು ತರುವಾಯ ಕರಾಚಿ ಮತ್ತು ಅದರ ಉಪನಗರಗಳಿಗೆ ತೆರಳಿ ಅಲ್ಲಿ ಭಯೋತ್ಪಾದನೆ ದಾಳಿಯ ತಾಲೀಮು ನಡೆಸಿದರು.

2008ರ ಮೇನಲ್ಲಿ ಕಾರ್ಯಾಚರಣೆ ಆರಂಭಿಸಿದ ಸಂಘಟನೆ ಕರಾಚಿ ಸುತ್ತಮುತ್ತ ವಿವಿಧ ನೆರೆಹೊರೆಗಳಲ್ಲಿ ವಾಸಿಸುತ್ತಾ ದಾಳಿಗೆ ತರಬೇತಿ ಮತ್ತು ಪಿತೂರಿ ರೂಪಿಸಿತ್ತೆಂದು ತಿಳಿದುಬಂದಿದೆ. ಸೆಲ್‌ಫೋನ್‌ಗಳನ್ನು ಬಳಸಿ, ಕೆಲವು ಕಳವು ಮಾಡಿದ ಸಂಖ್ಯೆಗಳ ಮ‌ೂಲಕ ವಿವಿಧ ಕರೆಗಳನ್ನು ಗುಂಪು ಮಾಡಿತ್ತಲ್ಲದೇ ಇಂಟರ್‌ನೆಟ್‌ನಲ್ಲಿ ವಾಯ್ಸ್ ಲೈನ್‌ಗಳನ್ನು ಸ್ಥಾಪನೆ ಮಾಡಿತ್ತು. ಜಲಕ್ರೀಡೆಯ ಅಂಗಡಿಯೊಂದರಲ್ಲಿ ಗಾಳಿ ತುಂಬುವ ದೋಣಿ, ಏರ್ ಪಂಪ್, ಜೀವರಕ್ಷಕ ಕವಚ ಮತ್ತು ಎಂಜಿನ್‌ಗಳನ್ನು ಅವರು ಖರೀದಿಸಿದ್ದರು.

ಐದು ಹುಲ್ಲಿನ ಕೋಣೆಗಳು ಮತ್ತು ಮ‌ೂರು ಕೋಣೆಗಳ ಮನೆಯುಳ್ಳ ತರಬೇತಿ ಶಿಬಿರವೊಂದು ಖಾರಿಯೊಂದರ ಬಳಿಯಿದ್ದು, ಅಲ್ಲಿ ಅವರು ಮುಕ್ತವಾಗಿ ಜಲತರಬೇತಿ ಪಡೆಯುತ್ತಿದ್ದರು. ಬಳಿಕ ಪೊಲೀಸರು ವಿಪುಲ ಸಾಕ್ಷ್ಯಾಧಾರಗಳನ್ನು ಪತ್ತೆಹಚ್ಚಿದ್ದು, ಭಯೋತ್ಪಾದನೆ ಸಾಹಿತ್ಯ, ಪಾಕೆಟ್ ಡೈರಿಗಳು, ಖರ್ಚು ಮಾಡಿದ ಮತ್ತು ಸಜೀವ ಮದ್ದುಗುಂಡು, ಖಾಲಿ ಬಂದೂಕಿನ ಮ್ಯಾಗಜಿನ್‌ಗಳು, ವಿತರಿಸಿದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಪೊಲೀಸರು ಪತ್ತೆಹಚ್ಚಿದರೆಂದು ಪಾಕಿಸ್ತಾನದ ದಾಖಲೆ ತಿಳಿಸಿದೆಯೆಂದು ಟೈಮ್ಸ್ ತಿಳಿಸಿದೆ.

ಅಜಿಜಾಬಾದ್ ಎಂದು ಕರೆಯುವ ಇನ್ನೊಂದು ಶಿಬಿರದಲ್ಲಿ ಸಂಘಟನೆ ಮತ್ತು ಅದರ ತರಬೇತಿದಾರರು ತರಗತಿಯೊಂದನ್ನು ಸ್ಥಾಪಿಸಿದ್ದರು. ದಾಳಿಯ ಸಂದರ್ಭದಲ್ಲಿ ತಮ್ಮನ್ನು ನಿಭಾಯಿಸುವವರ ಜತೆ ಸಂಪರ್ಕದಲ್ಲಿರಿಸುವ ಮೊಬೈಲ್ ಫೋನ್ ಬಳಸುವ ಬಗ್ಗೆ ಲಿಖಿತ ಕೈಪಿಡಿಗಳ ಮ‌ೂಲಕ ಭಯೋತ್ಪಾದಕರು ತರಬೇತಿ ಪಡೆದಿದ್ದರು.ಭಾರತದ ಕರಾವಳಿ ತೀರದ ವಿವರವಾದ ನಕ್ಷೆಗಳನ್ನು ಜಾಲಾಡಿದ ಅವರು, ಮುಂಬೈಗೆ ತೆರಳುವ ಬಗ್ಗೆ ಸಂಚು ರೂಪಿಸಿದರು. ಗ್ಲೋಬಲ್ ಪೋಸಿಷನಿಂಗ್ ಉಪಕರಣಗಳ ಬಳಕೆಯನ್ನು ಅವರು ಕಲಿತರು.
ಸಂಬಂಧಿತ ಮಾಹಿತಿ ಹುಡುಕಿ