ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಮರ ಕೈದಿಗಳ ಶಿಬಿರ 900,000 ಪೌಂಡ್‌ಗೆ ಮಾರಾಟಕ್ಕೆ (camp | Britain | prisoner-of-war | Durham)
 
ಬ್ರಿಟನ್‌ನಲ್ಲಿ ಮಾಜಿ 2ನೇ ವಿಶ್ವಮಹಾಯುದ್ಧದ ಸಮರ ಕೈದಿಗಳ ಶಿಬಿರವನ್ನು 900,000 ಪೌಂಡ್ ಮಾರಾಟಕ್ಕೆ ಈ-ಬೇನಲ್ಲಿ ಜಾಹೀರಾತು ಪ್ರಕಟಿಸಲಾಗಿದ್ದು, ಇದೊಂದು ವಿಶಿಷ್ಠ ವಿರಾಮದ ಆಕರ್ಷಣೆಯೆಂದು ಜಾಹೀರಾತಿನಲ್ಲಿ ವರ್ಣಿಸಲಾಗಿದೆ. ಕ್ರೂಕ್ ಬಳಿಯ ಹಾರ್ಪರ್ಲೆ ಸಮರಕೈದಿಗಳ ಶಿಬಿರದಲ್ಲಿ 1939-1945ರ ಸಮರದ ಸಂದರ್ಭದಲ್ಲಿ ಜರ್ಮನಿ ಮತ್ತು ಇಟಲಿ ಕೈದಿಗಳನ್ನು ಸೆರೆಯಲ್ಲಿಡಲಾಗಿತ್ತು.

ಬೂದುಬಣ್ಣದ ಕುಟೀರಗಳನ್ನು 2004ರಲ್ಲಿ ಪ್ರವಾಸಿ ಆಕರ್ಷಣೆಯಾಗಿ ಪರಿವರ್ತಿಸಲಾಗಿದ್ದು, ಅದರ ಪ್ರಸಕ್ತ ಮಾಲೀಕರಾದ ಜೇಮ್ಸ್ ಮತ್ತು ಲೀಸ್ ಮೆಕ್‌ಲೋಡ್, ಅದನ್ನು ಪುನಶ್ಚೇತನಗೊಳಿಸುವ ಅವರ ಯೋಜನೆಗೆ ಹಣದ ಕೊರತೆಯಿತ್ತೆಂದು ತಿಳಿಸಿದ್ದಾರೆ. ಈ-ಬೆ ಸೈಟಿನಲ್ಲಿ ಮಂಗಳವಾರ ಪ್ರಕಟವಾದ ಜಾಹೀರಾತಿನಲ್ಲಿ ಇತಿಹಾಸದ ಚೂರನ್ನು ಖರೀದಿಸುವ ವಿಶಿಷ್ಠ ಅವಕಾಶವೆಂದು ವರ್ಣಿಸಲಾಗಿದೆ.

ಶಿಬಿರವು 49 ನಿರ್ಮಿತ ಕುಟೀರಗಳ ಜತೆ ಎರಡು ಕಟ್ಟಡಗಳನ್ನು ಒಳಗೊಂಡಿದ್ದು, ಮೊದಲನೆಯದು ಚಿತ್ರಮಂದಿರವಾಗಿದ್ದು, ಅಲಂಕೃತ ಒಳಾಂಗಣ ಪ್ಯಾನೆಲ್ ಅವಶೇಷಗಳು ಇನ್ನೂ ಉಳಿದಿವೆಯೆಂದು ಜಾಹೀರಾತು ತಿಳಿಸಿದೆ.ಎರಡನೇ ಕಟ್ಟಡವು ರೈನ್ ಕಣಿವೆ, ಪ್ರಾಣಿಗಳು ಮತ್ತು ಲೇಕ್‌ಲ್ಯಾಂಡ್ ದೃಶ್ಯಗಳನ್ನು ತೋರಿಸಲು ಮೀಸಲಾದ ಕ್ಯಾಂಟೀನ್ ಕಟ್ಟಡವೆಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಈ ಸ್ಥಳದಲ್ಲಿ ಉದ್ಯಾನ ಕೇಂದ್ರ, ರೆಸ್ಟರೆಂಟ್, ಫಾರಂ ಶಾಪ್ ಮತ್ತು ಮ‌್ಯೂಸಿಯಂ ಹೊಂದಿದ್ದು, ಥಿಯೇಟರ್‌ನ್ನು ಗೋಡೆಯ ವರ್ಣಚಿತ್ರಗಳನ್ನು ಬರೆದ ಕೈದಿಗಳೇ ನಿರ್ಮಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ