ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » '20 ಮಹಿಳೆಯರನ್ನು ಬಿಡುತ್ತೇವೆ, ಶಾಲಿತ್ ವಿಡಿಯೊ ಕೊಡಿ' (Shalit | Israel | Video | Gaza)
 
ಸೆರೆಸಿಕ್ಕಿದ ಸೈನಿಕ ಗಿಲಾಡ್ ಶಾಲಿತ್ ಇನ್ನೂ ಬದುಕಿದ್ದಾನೆಂದು ಸಾಬೀತು ಮಾಡುವುದಕ್ಕೆ ಪ್ರತಿಯಾಗಿ 20 ಪ್ಯಾಲೆಸ್ಟೀನ್ ಮಹಿಳೆಯರನ್ನು ಬಂಧನದಿಂದ ಬಿಡುಗಡೆ ಮಾಡುವುದಾಗಿ ಇಸ್ರೇಲ್ ತಿಳಿಸಿದೆ. ಗಿಲಾಡ್ ಶಾಲಿತ್‌ನನ್ನು ಸೆರೆಹಿಡಿದ ಉಗ್ರರು ತೆಗೆದ ವಿಡಿಯೋ ಚಿತ್ರವನ್ನು ಸ್ವೀಕರಿಸಲು ತಾವು ಕಾಯುತ್ತಿರುವುದಾಗಿ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್‌ಯಾಹು ಕಚೇರಿಯ ಹೇಳಿಕೆ ತಿಳಿಸಿದೆ.

ಇಸ್ರೇಲ್ ಹತ್ತಾರು ಮಹಿಳೆಯರ ಜತೆ ಸುಮಾರು 10,000 ಪೆಲೆಸ್ಟೀನಿಯರನ್ನು ಸೆರೆಯಲ್ಲಿಟ್ಟಿದೆ. 006ರಲ್ಲಿ ಇಸ್ರೇಲಿ ಗಡಿ ನೆಲೆಯ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ ಗಿಲಾಡ್ ಶಾಲಿತ್‌ನನ್ನು ಸೆರೆಹಿಡಿದ ಬಳಿಕ ಅವನ ಸುಳಿವೇ ಪತ್ತೆಯಾಗಿಲ್ಲ.

ಈ ಹಿನ್ನೆಲೆಯಲ್ಲಿ ಅವನ ಸುಳಿವಿನ ಬಗ್ಗೆ ಮಾಹಿತಿ ನೀಡಿದರೆ ಸೆರೆಯಲ್ಲಿರುವ 20 ಪ್ಯಾಲೇಸ್ಟೀನ್ ಮಹಿಳೆಯರನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲಿ ಹೇಳಿಕೆ ತಿಳಿಸಿದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರು ವಿಶ್ವಾಸ ಕುದುರಿಸುವ ಕ್ರಮವಾಗಿ ಈ ಒಪ್ಪಂದ ಮಾಡಿದ್ದಾರೆಂದು ಇಸ್ರೇಲಿ ಹೇಳಿಕೆ ತಿಳಿಸಿದೆ
ಸಂಬಂಧಿತ ಮಾಹಿತಿ ಹುಡುಕಿ