ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಹ್ಸೂದ್ ವಿಡಿಯೊ ಚಿತ್ರ ತೋರಿಸಿದ ತಾಲಿಬಾನ್ (Mehsud | Taliban | Video | US drone)
 
ಅಮೆರಿಕದ ಡ್ರೋನ್ ವಿಮಾನದಿಂದ ಹಾರಿಸಿದ ಕ್ಷಿಪಣಿ ದಾಳಿಗೆ ಬಲಿಯಾದ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹ್ಸೂದ್‌ನ ಮೃತದೇಹದ ವಿಡಿಯೊ ಚಿತ್ರವನ್ನು ಪಾಕಿಸ್ತಾನ ತಾಲಿಬಾನ್ ಬಿಡುಗಡೆ ಮಾಡಿದ್ದು, ಮೆಹ್ಸೂದ್ ಸಾವನ್ನು ದೃಢಪಡಿಸಿದೆ. ಸುಮಾರು 2 ನಿಮಿಷಗಳ ವಿಡಿಯೊವನ್ನು ಸುದ್ದಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದ್ದು, ಪಾಕಿಸ್ತಾನ ತಾಲಿಬಾನಿನ ಮಾಜಿ ಮುಖ್ಯಸ್ಥನ ದೇಹವನ್ನು ಬಿಳಿಯ ಬಟ್ಟೆಯಿಂದ ಮುಚ್ಚಲಾಗಿದ್ದು ಹಾಸಿಗೆ ಮೇಲೆ ಮುಖ ತೆರೆದಿರುವಂತೆ ಮಲಗಿಸಲಾಗಿತ್ತು.

ಅವನ ಮುಖದ ಮೇಲೆ ಕೆಲವು ತರಚಿದ ಗಾಯ ಬಿಟ್ಟರೆ ಯಾವುದೇ ಪ್ರಮುಖ ಗಾಯದ ಗುರುತುಗಳು ಇರಲಿಲ್ಲ. ವಿಡಿಯೊ ಚಿತ್ರವನ್ನು ಬಿಬಿಸಿ ಉರ್ದು ಸೇವೆಯು ಸ್ವೀಕರಿಸಿದ್ದು, ಅದರ ಧ್ವನಿಯ ಗುಣಮಟ್ಟ ಕಳಪೆಯಾಗಿದೆ. ಹಿನ್ನೆಲೆಯಲ್ಲಿ ಬಹುಷಃ ವಿಡಿಯೋ ತಯಾರಿಸಿದ ವ್ಯಕ್ತಿಯದ್ದೆಂದು ಹೇಳಲಾದ ಧ್ವನಿಯು ಪಾಸ್ಟೊ ಭಾಷೆಯಲ್ಲಿದೆ. ವಾಜಿರಿಸ್ತಾನದ ಅವನ ಮಾವನ ಮನೆಯಲ್ಲಿ ಡ್ರೋನ್ ದಾಳಿಗೆ ಮೆಹ್ಸೂದ್ ಬಲಿಯಾದಾಗ, ಅಮೆರಿಕ ಮತ್ತು ಪಾಕಿಸ್ತಾನ ಅಧಿಕಾರಿಗಳು ತಕ್ಷಣವೇ ಅವನ ಸಾವಿನ ಬಗ್ಗೆ ದೃಢಪಡಿಸಿದ್ದರು.

ಆದರೆ ದಾಳಿಯಲ್ಲಿ ಅವನು ಗಾಯಗೊಂಡಿದ್ದು ಬಳಿಕ ಸತ್ತಿದ್ದಾನೆಂದು ಒಪ್ಪಿಕೊಳ್ಳಲು ತಾಲಿಬಾನ್ ಸುಮಾರು 3 ತಿಂಗಳು ತೆಗೆದುಕೊಂಡಿತು. ಆಗಸ್ಟ್ ಅಂತ್ಯದಲ್ಲಿ ಮೆಹ್ಸೂದ್ ಸಾವನ್ನು ತಾಲಿಬಾನ್ ಪ್ರಕಟಿಸಿ ಅವನ ಉತ್ತರಾಧಿಕಾರಿಯಾಗಿ ಹಕೀಮುಲ್ಲಾ ಮೆಹ್ಸೂದ್‌ನನ್ನು ಪ್ರಕಟಿಸಿತು.
ಸಂಬಂಧಿತ ಮಾಹಿತಿ ಹುಡುಕಿ