ಕಾಂಬೋಡಿಯಾದ ಹಲವು ಹಳ್ಳಿಗಳು, ವಿಯೆಟ್ನಾಂನ ಅಸಂಖ್ಯಾ ಮನೆಗಳು ಹಾಗೂ ಫಿಲಿಫೈನ್ಸ್ ರಾಜಧಾನಿಯನ್ನು ಬಹುತೇಕ ಮುಳುಗುವಂತೆ ಮಾಡಿರುವ ಕೆಸ್ತಾನ ಚಂಡಮಾರುತ ಈವರೆಗೆ 312 ಜನರನ್ನು ಬಲಿ ತೆಗೆದುಕೊಂಡಿದೆ.
ಕಳೆದ ಹಲವು ವರ್ಷಗಳಲ್ಲಿ ತಾವು ಕಂಡ ಅತ್ಯಂತ ವಿನಾಶಕಾರಿ ಚಂಡಮಾರುತ ಇದೆಂದು ಕಾಂಬೋಡಿಯಾದ ನಾಗರಿಕರು ತಿಳಿಸಿದ್ದಾರೆ. ವಿಯೆಟ್ನಾಂನಲ್ಲಿ ಪ್ರಬಲ ಬಿರುಗಾಳಿ ಬೀಸಿದ್ದು ಹಲವೆಡೆ ಸಂಭವಿಸಿದ ಭೂಕುಸಿತಕ್ಕೆ ಹಲವಾರು ಮನೆಗಳು ನಾಶವಾಗಿವೆ. 52 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಅಧಿಕೃತ ದಾಖಲೆಗಳು ತಿಳಿಸಿವೆ.
ಚಂಡಮಾರುತ ಹೊಡೆತಕ್ಕೆ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಒಟ್ಟು 1.7ಲಕ್ಷ ಮನೆಗಳು ಕುಸಿದಿದ್ದು ವಿಯೆಟ್ನಾಂನ ಆರು ಪ್ರಾಂತ್ಯಗಳಲ್ಲಿ ಬೆಳೆಗಳು ಸಂಪೂರ್ಣ ನಾಶವಾಗಿವೆ. 3.5ಲಕ್ಷ ಜನರನ್ನು ಈವರೆಗೆ ರಕ್ಷಿಸಲಾಗಿದ್ದು ಅವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿದೆ.