ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್ಚರಿಕೆ; ಭಾರತಕ್ಕೂ ಅಪ್ಪಳಿಸಲಿದೆ 'ಸುನಾಮಿ' (India | typhoon | Vietnam | Typhoon Ketsana | Cambodia)
 
ಸುನಾಮಿಯಿಂದಾಗಿ ಅತ್ತ ಸಮೋವಾದಲ್ಲಿ ತೀವ್ರ ಹಾನಿಯಾಗಿರುವ ಬೆನ್ನಲ್ಲೇ, ಇಂಡೋನೇಷ್ಯಾದ ಸಾಗರದಾಳದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ ನೂರಾರು ಮಂದಿ ಬಲಿಯಾಗಿದ್ದು,ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ರಿಕ್ಟರ್ ಮಾಪಕದಲ್ಲಿ 7.6ತೀವ್ರತೆಯಿದ್ದ ಪ್ರಬಲ ಭೂಕಂಪ ಸುಮಾತ್ರ ದ್ವೀಪದಲ್ಲಿ ಸಂಭವಿಸಿದೆ. ಆ ನಿಟ್ಟಿನಲ್ಲಿ ಫೆಸಿಫಿಕ್ ಸುನಾಮಿ ಮುನ್ಸೂಚನಾ ಕೇಂದ್ರವು ಇಂಡೋನೇಷ್ಯಾ, ಭಾರತ, ಮಲೇಷ್ಯಾ ಮತ್ತು ಥಾಯ್ಲೆಂಡ್ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಹವಾಮಾನ ಇಲಾಖೆ ರಾಜ್ಯದ ಕರಾವಳಿ ಪ್ರದೇಶಗಳಲ್ಲಿನ ಪ್ರದೇಶಗಳಲ್ಲಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ