ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾದಲ್ಲಿ 60ನೇ ಸ್ವಾತಂತ್ರ್ಯೋತ್ಸವ ಸಂಭ್ರಮ (China | Communist | Beijing | Hu Jintao)
 
ಚೀನಾದಲ್ಲಿ ಗುರುವಾರ ಕಮ್ಯುನಿಸ್ಟ್ ಆಡಳಿತ ಜಾರಿಯಾಗಿ 60 ವರ್ಷಗಳು ಕಳೆದ ಸ್ವಾತಂತ್ರ್ಯೋತ್ಸವ ನೆನಪಿಗಾಗಿ ಮಿಲಿಟರಿ ಸಿಬ್ಬಂದಿಯು ದೊಡ್ಡ ಪೆರೇಡ್ ಪ್ರದರ್ಶಿಸಲಿದ್ದು, ನೂರು ಸಾವಿರ ಸೈನಿಕರು ಪಥಸಂಚಲನದ ಮ‌ೂಲಕ ದೇಶಭಕ್ತಿ ಪ್ರದರ್ಶಿಸಲಿದ್ದಾರೆ. ಬೀಜಿಂಗ್ ಐತಿಹಾಸಿಕ ಟಿಯಾನ್‌ಮೆನ್ ಚೌಕದಲ್ಲಿ ಪ್ರತಿಧ್ವನಿಸಿದ 60 ಬಂದೂಕಿನ ಸೆಲ್ಯೂಟ್‌ನೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರದ 6 ದಶಕಗಳ ಜಾಗತಿಕ ಶಕ್ತಿಯಾಗಿ ಪುನಶ್ಚೇತನವನ್ನು ಚೀನಾ ವೈಭವೀಕರಿಸಲಿದ್ದು, ಮಿಲಿಟರಿ ಪೆರೇಡ್ ಮತ್ತು ಕಮ್ಯುನಿಸ್ಟ್ ನೇತೃತ್ವದ ಮರುಹುಟ್ಟನ್ನು ಬಿಂಬಿಸುವ ಮನಮೋಹಕ ಸ್ತಬ್ಧಚಿತ್ರಗಳು ಸೇರಿದಂತೆ ಸಾಮ‌ೂಹಿಕ ದೇಶಭಕ್ತಿಯನ್ನು ಪ್ರದರ್ಶಿಸಲಿದೆ. ಈ ವರ್ಷದ ಉತ್ಸವವು ಹಿಂದಿನ ಆಚರಣೆಗಳಿಗಿಂತ ಮೇಲುಗೈ ಹೊಂದಲಿದ್ದು, ಸುಮಾರು ಎರಡು ಲಕ್ಷ ಜನರು ನೆರೆಯುವರೆಂದು ನಿರೀಕ್ಷಿಸಲಾಗಿದೆ.

ಚೀನಾ ಜಗತ್ತಿನಲ್ಲೇ ಮಹಾನ್ ಶಕ್ತಿಯಾಗಿ ಹೊರಹೊಮ್ಮಿದೆಯೆಂದು ಸ್ಪಷ್ಟ ಸಂದೇಶವನ್ನು ಕಳಿಸಲು ಚೀನಾದ ಅಧಿಕಾರಿಗಳು ಬಯಸಿದ್ದಾರೆ.ಅಧ್ಯಕ್ಷ ಹು ಜಿಂಟಾವೊ, ಬೂದು ಮಾವೊ ಸಮವಸ್ತ್ರದಲ್ಲಿ ಸಾವಿರಾರು ಪಡೆಗಳು ಮತ್ತು ಟ್ಯಾಂಕ್ ಮತ್ತಿತರ ಶಸ್ತ್ರಾಸ್ತ್ರಗಳ ಪರಾಮರ್ಶೆ ನಡೆಸಿ, ತೆರೆದ ಕೆಂಪು ಧ್ವಜದ ಲಿಮೋಸಿನ್‌ನಲ್ಲಿ ಪ್ರಯಾಣಿಸುತ್ತಾ, 'ಹಲೋ ಕಾಮ್ರೇಡ್ಸ್' ಎಂದು ಕೂಗಿದರು.

ನಾವು ಎಲ್ಲ ರೀತಿಯ ಕಷ್ಟಗಳನ್ನು ಮತ್ತು ಹಿನ್ನಡೆಗಳನ್ನು ಜಯಿಸಿ ವಿಶ್ವಕ್ಕೆ ಗೋಚರವಾಗುವ ಮಹಾ ಸಾಧನೆಗಳನ್ನು ಮಾಡಿದ್ದೇವೆಂದು ಹು ಟಿಯಾನ್‌ಮೆನ್ ಗೇಟ್‌ ಮೇಲೆ ನಿಂತು ಭಾಷಣ ಮಾಡಿದರು. ಚೀನಾದಲ್ಲಿ ಸಾಮಾನ್ಯವಾಗಿರುವ ಪ್ರತಿಭಟನೆಗಳಿಂದ ಸಮಾರಂಭಕ್ಕೆ ಅಡ್ಡಿಯಾಗಬಹುದೆಂದು ಬೀಜಿಂಗ್‌ನಲ್ಲಿ ವಾರಗಳವರೆಗೆ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಕೇಂದ್ರ ಬೀಜಿಂಗ್‌ನ ಭಾಗಗಳನ್ನು ಮುಚ್ಚಲಾಗಿದ್ದು, ಮಂಗಳವಾರದಿಂದ ಆರಂಭವಾಗುವಂತೆ ವಾಣಿಜ್ಯಕಚೇರಿಗಳನ್ನು ಮುಚ್ಚಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ