ಜೋಹಾನ್ಸ್ಬರ್ಗ್, ಗುರುವಾರ, 1 ಅಕ್ಟೋಬರ್ 2009( 13:24 IST )
ದಕ್ಷಿಣ ಆಫ್ರಿಕಾದ ಕಲ್ಲಿನಾನ್ ಗಣಿಯಲ್ಲಿ ಅಮೂಲ್ಯವಾದ 507.55 ಕ್ಯಾರೆಟ್ ಬಿಳಿ ವಜ್ರ ಪತ್ತೆಯಾಗಿದ್ದು, ಜಗತ್ತಿನಾದ್ಯಂತ ಪತ್ತೆಯಾದ ಅಗ್ರ 20 ಉನ್ನತ ಗುಣಮಟ್ಟದ ಒರಟು ವಜ್ರಗಳ ಪೈಕಿ ಒಂದಾಗಿದೆಯೆಂದು ಹೇಳಲಾಗಿದೆ. 507 ಕ್ಯಾರೆಟ್‌ನ 100 ಗ್ರಾಂ ತೂಗುವ ವಜ್ರವು ಕಲಿನಾನ್ ಗಣಿಯಲ್ಲಿ ಪತ್ತೆಯಾದ ಇತರೆ ಸುಪ್ರಸಿದ್ಧ ರತ್ನಗಳ ಸಾಲಿಗೆ ಸೇರಿದೆ.
ಸೆಪ್ಟೆಂಬರ್ 24ರಂದು ಇತ್ತೀಚಿನ ರತ್ನವನ್ನು ಪತ್ತೆಮಾಡಲಾಗಿದ್ದು, ಪ್ರಸಕ್ತ ವಿಶ್ಲೇಷಣೆಗಾಗಿ ತಜ್ಞರ ಬಳಿಯಿದೆಯೆಂದು ಅಂತಾರಾಷ್ಟ್ರೀಯ ವಜ್ರ ಗಣಿಗಾರಿಕೆ ತಂಡ ಪೆಟ್ರಾ ಡೈಮಂಡ್ಸ್ ಲಿಮಿಟೆಡ್ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.
ಪೆಟ್ರಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಜ್ರದ ಪತ್ತೆ ಬಗ್ಗೆ ಮಾತನಾಡುತ್ತಾ, ಕಲಿನಾನ್ ಗಣಿಯು ಜಗತ್ತಿಗೆ ಮನಮೋಹಕ, ಸುಂದರ ವಜ್ರವನ್ನು ನೀಡಿದೆ. ಆರಂಭದ ಸುಳಿವಿನ ಪ್ರಕಾರ ಈ ವಜ್ರವು ಶ್ರೇಷ್ಠ ಬಣ್ಣ ಮತ್ತು ಸ್ಫುಟತೆಯಿಂದ ಕೂಡಿದೆಯೆಂದು ಹೇಳಿದ್ದಾರೆ. ಕಲಿನಾನ್ ಗಣಿಯು 1905ರಲ್ಲಿ ಪ್ರಖ್ಯಾತ ಕಲಿನಾನ್ ವಜ್ರವನ್ನು ಇದಕ್ಕೆ ಮುಂಚೆ ಪತ್ತೆಮಾಡಿದ್ದು, 3106 ಕ್ಯಾರೆಟ್ ಮೌಲ್ಯದ ಈ ವಜ್ರವು ಬ್ರಿಟನ್ನಿನ ರಾಜಮನೆತನದ ಕಿರೀಟವನ್ನು ಅಲಂಕರಿಸಿದೆ.