ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್ ಪಡೆಗಳಿಗೆ ನಿಧಿ: ತೆರೆದೆದೆಯ ಪರೇಡ್ (Parade | Manchester | British troops)
 
ಸುಮಾರು 12 ಮಂದಿ ಗ್ಲಾಮರ್ ಯುವತಿಯರು ಉಡುಪು ಬಿಚ್ಚಿ ತೆರೆದೆದೆಯಲ್ಲಿ ಮ್ಯಾಂಚೆಸ್ಟರ್ ನಗರದಲ್ಲಿ ಮೆರವಣಿಗೆಯಲ್ಲಿ ತೆರಳಿದರು. ಈ ಟಾಪ್‌ಲೆಸ್ ಮೆರವಣಿಗೆ ಕಂಡು ಇದೇನು ಅಶ್ಲೀಲತೆಯ ಪ್ರದರ್ಶನವೆಂದು ಜನರು ಮ‌ೂಗುಮುರಿದಿರಬಹುದು.

ಆದರೆ ವಿದೇಶದಲ್ಲಿ ಹೋರಾಡುತ್ತಿರುವ ಬ್ರಿಟನ್ ಪಡೆಗಳಿಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಸದುದ್ದೇಶದಿಂದ ಗ್ಲಾಮರ್ ಯುವತಿಯರು ಟಾಪ್‌ಲೆಸ್ ಮೆರವಣಿಗೆ ಹಮ್ಮಿಕೊಂಡಿದ್ದರು.

ಬಿಗಿ ಲೆದರ್ ಚಡ್ಡಿಗಳನ್ನು ಧರಿಸಿದ್ದ ಮಹಿಳೆಯರು ತಮ್ಮ ಎದೆಯ ಮೇಲೆ ಕ್ಯಾಮೋಫ್ಲೇಜ್ ದೇಹದ ಪೇಂಟ್ ಹಚ್ಚಿಕೊಂಡಿದ್ದನ್ನು ಕಂಡು ಚಕಿತರಾದ ದಾರಿಹೋಕರು ಮತ್ತು ಸಾರ್ವಜನಿಕರನ್ನು ವಿದೇಶದಲ್ಲಿ ಹೋರಾಡುವ ಬ್ರಿಟನ್ ಪಡೆಗಳಿಗೆ ದೇಣಿಗೆ ನೀಡುವಂತೆ ತೆರೆದೆದೆಯ ಕನ್ಯೆಯರು ಬಕೆಟ್‌ಗಳನ್ನು ಮುಂದೆ ಹಿಡಿದರೆಂದು ಸನ್ ವರದಿ ಮಾಡಿದೆ.

ಸೇನಾಪಡೆಗಳಿಗೆ ನೆರವು ನೀಡುವ ಸೈನಿಕರ ದತ್ತಿ ವ್ಯವಸ್ಥೆಗೆ ಬೆಂಬಲಿಸುವ ಸಲುವಾಗಿ ನಡೆದ ಆಂದೋಳನದ ಭಾಗವಾಗಿ ಈ ಕೂಟವನ್ನು ಕಲಾವಿದ ಫ್ಯಾನಿ ಗೋಗ್ ಆಯೋಜಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್, ಮ್ಯಾಂಚೆಸ್ಟರ್, ಬ್ರಿಟನ್