ಪ್ರತಿಭಾವಂತ ಭಾರತೀಯ ಕಲಾವಿದೆಯೊಬ್ಬರು ಹಿಮಾಲಯದ ಪ್ರಕೃತಿ ದೃಶ್ಯದ ಸೌಂದರ್ಯವನ್ನು ಬಿಂಬಿಸುವ ವರ್ಣಚಿತ್ರಗಳ ತನ್ನ ಇತ್ತೀಚಿನ ಪ್ರದರ್ಶನವನ್ನು ಮಹಾತ್ಮ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಮುಡುಪಾಗಿಟ್ಟಿದ್ದಾರೆ. ನೆಹರೂ ಕೇಂದ್ರದ ಇಲ್ಲಿನ ನಿರ್ದೇಶಕ ಮೋನಿಕಾ ಮೆಹ್ತಾ ಅವರು ಕಲಾವಿದೆ ಅನುರಾಧಾ ರಿಶಿ ಅವರ ವರ್ಣಚಿತ್ರಗಳನ್ನು ಮನೋಜ್ಞ ಕಲೆ ಎಂದು ಬಣ್ಣಿಸಿದ್ದಾರೆ.
'ನೇಚರ್ ಇನ್ ಪೀಸ್-ಟ್ರಿಬ್ಯೂಟ್ ಟು ಮಹಾತ್ಮ' ಶಿರೋನಾಮೆಯ ಅನುರಾಧ ಅವರ ಕಲೆಯು ಜಮ್ಮು ಕಾಶ್ಮೀರದ ಸುತ್ತಮುತ್ತಲಿನ ಸುಂದರ ನಿಸರ್ಗವನ್ನು ವೈಭವೀಕರಿಸಿದೆ. ನಿಸರ್ಗದ ಜತೆ ಬೆರೆತು ಅದರ ಭಾಗವಾಗುವ ಜಾಗತಿಕ ಕಾಳಜಿಗೆ ಸ್ಪಂದಿಸಲು, ಮಹಾತ್ಮ ಗಾಂಧಿಯವರ ಶಾಂತಿ ಮತ್ತು ಅಹಿಂಸಾವಾದದಲ್ಲಿ ದೃಢ ನಂಬಿಕೆಯುಳ್ಳ ಅನುರಾಧ, ಗಾಂಧೀಜಿಯವರಿಗೆ ತಮ್ಮ ಕಲೆಯನ್ನು ಮುಡಿಪಾಗಿಟ್ಟಿದ್ದಾರೆಂದು ಮೊಹ್ತಾ ತಿಳಿಸಿದ್ದಾರೆ.
ಇಷ್ಟೇ ಅಲ್ಲದೇ, ಕಲಾಕೇಂದ್ರ ಜಮ್ಮುವಿನಲ್ಲಿ 'ಇನ್ಸ್ಪೈರೇಷನ್ಸ್', ನವದೆಹಲಿಯ ವಿಜ್ಞಾನ ಮತ್ತು ಸಂಸ್ಕೃತಿಯ ರಷ್ಯಾ ಕೇಂದ್ರದಲ್ಲಿ ಮತ್ತು ಸೋಫಿಟಾಲ್ ಸೂರ್ಯ ಹೊಟೆಲ್‌ನಲ್ಲಿ 'ಮೆಜೆಸ್ಟಿಕ್ ರಿಫ್ಲೆಕ್ಷನ್ಸ್' ಜತೆಗೆ ಪ್ರಖ್ಯಾತ ಸ್ಥಳಗಳಲ್ಲಿ ಸಾಮೂಹಿಕ ಪ್ರದರ್ಶನಗಳಲ್ಲಿ ಅವರು ಭಾಗವಹಿಸಿದ್ದಾರೆ.