ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುಷ್‌ಗೆ ಬೂಟೆಸೆತದ ಬಳಿಕ ಐಎಂಎಫ್ ನಿರ್ದೇಶಕರ ಸರದಿ (Istanbul | IMF Director | Strauss-Kahn,)
 
ಐಎಂಎಫ್ ನಿರ್ದೇಶಕ ಡಾಮಿನಿಕ್ ಸ್ಟ್ರಾಸ್ ಕಾನ್ ಅವರತ್ತ ಗುರುವಾರ ಬೂಟೊಂದನ್ನು ಎಸೆದ ವಿದ್ಯಾರ್ಥಿ-ಪತ್ರಕರ್ತನೊಬ್ಬ ವೇದಿಕೆಯತ್ತ ಓಡಿ, 'ಐಎಂಎಫ್ ಗೆಟ್‌ಔಟ್' ಎಂದು ಅಬ್ಬರಿಸಿದ ಘಟನೆ ವರದಿಯಾಗಿದೆ. ಹಣಕಾಸು ಅಧಿಕಾರಿ ಇಸ್ತಾನ್‌ಬುಲ್ ವಿಶ್ವವಿದ್ಯಾಲಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ವಿದ್ಯಾರ್ಥಿ ಬಿಳಿಯ ಕ್ರೀಡಾ ಬೂಟನ್ನು ಅವರತ್ತ ಎಸೆದನೆಂದು ವರದಿಯಾಗಿದೆ.

ಐಎಂಎಫ್ ಮುಖ್ಯಸ್ಥನು ಬೂಟೇಟಿನಿಂದ ಸ್ವಲ್ಪದರಲ್ಲಿ ಪಾರಾಗಿ ಬೂಟು ವೇದಿಕೆಯಲ್ಲಿ ಬಿದ್ದಿತೆಂದು ತಿಳಿದುಬಂದಿದೆ. ಸ್ಟ್ರಾಸ್ ಕಾನ್‌ಗೆ ಬೂಟು ತಾಗುವ ಅಪಾಯವಿಲ್ಲದೇ ಪಕ್ಕಕ್ಕೆ ಸರಿದರು ಮತ್ತು ಭದ್ರತಾ ಕಾವಲುಗಾರನೊಬ್ಬ ಅವರ ರಕ್ಷಣೆಗೆ ಧಾವಿಸಿದ.

ಇರಾಕಿನಲ್ಲಿ ಮಾಜಿ ಅಮೆರಿಕದ ಅಧ್ಯಕ್ಷ ಬುಷ್ ಅವರತ್ತ ಬೂಟುಗಳನ್ನು ಎಸೆಯುವ ಮ‌ೂಲಕ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ಇರಾಕಿ ಪತ್ರಕರ್ತನೊಬ್ಬನನ್ನು ಅನುಕರಿಸಿದ ವಿದ್ಯಾರ್ಥಿ ಕಮ್ ಪತ್ರಕರ್ತ ಐಎಂಎಫ್ ನಿರ್ದೇಶಕರತ್ತ ಬೂಟು ದಾಳಿ ಮಾಡಿದ್ದ. ಇತರೆ ಭದ್ರತಾ ಸಿಬ್ಬಂದಿ ಎಡಪಂಥೀಯ ಸುದ್ದಿಪತ್ರಿಕೆ ಹಿಡಿದಿದ್ದ ವಿದ್ಯಾರ್ಥಿಯನ್ನು ಸುತ್ತುವರಿದು, ಸ್ಪೀಕರ್ ವೇದಿಕೆಯನ್ನು ಮುಟ್ಟದಂತೆ ತಡೆದರು.

ಬಳಿಕ ಅವನನ್ನು ನೆಲಕ್ಕೆ ತಳ್ಳಿ ತಮ್ಮ ಕೈಗಳಿಂದ ಅವನ ಬಾಯನ್ನು ಮುಚ್ಚಿ, ಹಾಲ್‌ನಿಂದ ಹೊರಕ್ಕೆ ಎಳೆದೊಯ್ಡರು. ಮಹಿಳಾ ಪ್ರತಿಭಟನೆಕಾರಳೊಬ್ಬಳು ಬ್ಯಾನರ್‌ವೊಂದನ್ನು ಬಿಡಿಸುತ್ತಾ ಐಎಂಎಫ್ ತೊಲಗು ಎಂದು ಕಿರುಚಿದಕೂಡಲೇ ಸಮಾವೇಶದ ಕೋಣೆಯಿಂದ ಆಕೆಯನ್ನು ಹೊರಕ್ಕೆ ಒಯ್ಯಲಾಯಿತು. ಸೆಲ್‌ಕುಕ್ ಒಜ್ಜೆಕ್ ಎಂಬ ಈ ಪ್ರತಿಭಟನೆಕಾರ ಇಸ್ತಾನ್‌ಬುಲ್ ಬಿಲ್ಜಿ ವಿವಿಯ ಸಮಾವೇಶದಲ್ಲಿ ಇನ್ನೊಂದು ಟರ್ಕಿ ವಿವಿಯ ಅತಿಥಿ ವಿದ್ಯಾರ್ಥಿಯಾಗಿ ಹಾಜರಾಗಿದ್ದಾಗ ಬೂಟೆಸೆದು ತನ್ನ ಪ್ರತಾಪ ಪ್ರದರ್ಶಿಸಿದ ಘಟನೆ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಎಂಎಫ್, ಸ್ಟ್ರಾಸ್ ಕಾನ್