ಸೌಂದರ್ಯ ರಾಣಿ ರಿಸ್ ಲೊ ಅವರು ಒಳಉಡುಪುಗಳ ಖರೀದಿ ಸಲುವಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಕಳವು ಮಾಡಿದ ಸಂಗತಿ ಬಯಲಾದ ಬಳಿಕ ಮಿಸ್ ಸಿಂಗಪುರ ವರ್ಲ್ಡ್ ಪ್ರಶಸ್ತಿಯನ್ನು ಬಿಟ್ಟುಕೊಟ್ಟಿದ್ದಾರೆ.
ರಿಸ್ ಲೊ ಅವರು ವೈದ್ಯಕೀಯ ಕ್ಲಿನಿಕ್‌ನಲ್ಲಿ ಕೆಲಸ ಮಾಡುವಾಗ 7 ಕ್ರೆಡಿಟ್ ಕಾರ್ಡ್‌ಗಳನ್ನು ಕಳವು ಮಾಡಿ ಚಿನ್ನದ ಕಾಲಿನ ಸರಪಳಿ ಮತ್ತು ಫೋನುಗಳು, ಒಳಉಡುಪುಗಳು ಸೇರಿದಂತೆ ಸುಮಾರು 5662 ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಿದ್ದಾರೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದ ಬಳಿಕ ಅವರು ಗಳಿಸಿದ 2009ರ ಮಿಸ್ ಸಿಂಗಪುರ್ ವರ್ಲ್ಡ್ ಟೈಟಲ್ ತ್ಯಜಿಸಬೇಕೆಂದು ಸಾರ್ವಜನಿಕ ಒತ್ತಡ ಹೆಚ್ಚಾಗಿತ್ತು.
ರಿಸ್ ಲೊ ಸ್ವತಃ ಮಂಗಳವಾರ ರಾಜೀನಾಮೆ ನೀಡಿದ್ದಾರೆಂದು ಸೌಂದರ್ಯ ಸ್ಪರ್ಧೆ ಏರ್ಪಡಿಸಿದ ಇಆರ್‌ಎಂ ವಿಶ್ವ ಮಾರ್ಕೆಟಿಂಗ್ ಸಂಘಟಕರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಭುವನ ಸುಂದರಿ ಫೈನಲ್ಸ್‌ನಲ್ಲಿ ಅವರು ಪ್ರತಿನಿಧಿಸುವುದಿಲ್ಲ ಮತ್ತು ಅವರ ಬದಲಿಗೆ ಯಾರೆನ್ನುವುದು ನಿರ್ಧಾರವಾಗಿಲ್ಲ.