ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ (Australia | Student | Melbourne | Indian)
 
ಆಸ್ಟ್ರೇಲಿಯದಲ್ಲಿ ಭಾರತೀಯರ ಮೇಲೆ ಜನಾಂಗೀಯ ದ್ವೇಷದ ದಾಳಿಗಳಿಗೆ ಅಲ್ಪ ವಿರಾಮದ ನಂತರ ಇದೇ ಸಮುದಾಯದ ವಿದ್ಯಾರ್ಥಿಯೊಬ್ಬನಿಗೆ ಬೇಸ್‌ಬಾಲ್ ಬ್ಯಾಟ್ ಅಥವಾ ಮರದ ದೊಣ್ಣೆಯಿಂದ ಇಬ್ಬರು ವ್ಯಕ್ತಿಗಳು ಥಳಿಸಿದ ಘಟನೆ ಸಂಭವಿಸಿದೆ.

28 ವರ್ಷ ವಯಸ್ಸಿನ ವಿದ್ಯಾರ್ಥಿ ಕೈಲರ್ ಪ್ಲೈನ್ಸ್ ರೈಲು ನಿಲ್ದಾಣದ ಬಳಿ ಬಸ್ಸಿನಿಂದ ಇಳಿದ ಕೂಡಲೇ ಇಬ್ಬರಿಂದ ದಾಳಿಗೆ ಗುರಿಯಾದ. ಅಪ್ರಚೋದಿತ ದಾಳಿಯಿಂದ ಅವನ ತಲೆಗೆ ಗಾಯಗಳಾಗಿದ್ದು, 20 ಹೊಲಿಗೆಗಳನ್ನು ಹಾಕಲಾಗಿದೆಯೆಂದು ಏಜ್ ಸುದ್ದಿಪತ್ರಿಕೆ ವರದಿ ಮಾಡಿದೆ. ಸೆಪ್ಟೆಂಬರ್ 29ರಂದು ಬಸ್ಸಿನಿಂದಿಳಿದ ದುರ್ದೈವಿ ಪವರ್ ಬೀದಿಯಲ್ಲಿ ನಡೆದು ಹೋಗುವಾಗ ಇಬ್ಬರು ವ್ಯಕ್ತಿಗಳು ಅವನ ಬಳಿ ಬಂದರೆಂದು ಪೊಲೀಸರು ತಿಳಿಸಿದ್ದಾರೆ.

ಸಿಗರೇಟಿಗಾಗಿ ಅವರು ಕೇಳಿದಾಗ ಭಾರತೀಯ ಇಬ್ಬರಿಗೂ ಒಂದೊಂದು ಸಿಗರೇಟು ನೀಡಿದನೆಂದು ವರದಿಯಾಗಿದೆ. ಸಿಗರೇಟು ನೀಡಿ ಹಿಂದೆ ತಿರುಗಿದ ಕೂಡಲೇ ಅವನ ತಲೆಯ ಮೇಲೆ ಕನಿಷ್ಠ 6 ಬಾರಿ ಮರದ ಕೋಲು ಅಥವಾ ಬ್ಯಾಸ್ಕೆಟ್‌ಬಾಲ್ ಬ್ಯಾಟ್‌ನಿಂದ ಥಳಿಸಿದ ಕೂಡಲೇ ಅವನು ಪ್ರಜ್ಞೆ ತಪ್ಪಿದನೆಂದು ತಿಳಿದುಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ