ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಲುಗಿದ ಇಂಡೊನೇಶಿಯ: ವಿದೇಶಿ ನೆರವಿಗೆ ಯಾಚನೆ (Indonesia | Quake | Padang | Susilo)
 
ಭೂಕಂಪದಿಂದ ನಲುಗಿದ ಇಂಡೊನೇಶಿಯ ಶುಕ್ರವಾರ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿದೇಶಿ ನೆರವಿಗಾಗಿ ಸಹಾಯ ಹಸ್ತ ಚಾಚಿದೆ. ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ಕೊಳೆತ ಶವಗಳಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತಿದ್ದು, ರಕ್ಷಣಾ ತಂಡ ಅವಶೇಷಗಳಲ್ಲಿ ಬದುಕುಳಿದವರಿಗಾಗಿ ಶೋಧ ನಡೆಸುತ್ತಿದೆ.

ಇಂಡೊನೇಶಿಯ ಪಡಾಂಗ್‌ನ ಶಾಲೆಯೊಂದರ ಅವಶೇಷ ಮತ್ತಿತರ ಕಟ್ಟಡಗಳ ಅವಶೇಷಗಳಲ್ಲಿ ರಕ್ಷಣಾ ತಂಡ ತೀವ್ರ ಶೋಧ ನಡೆಸಿದೆ. ಸುಮಾರು 1100 ಜನರನ್ನು ಬಲಿತೆಗೆದುಕೊಂಡ ಭೂಕಂಪ ಸಂಭವಿಸಿ ಎರಡು ದಿನಗಳ ಬಳಿಕ, ಕೆಲವೇ ಮಂದಿ ಬದುಕುಳಿರುವುದು ಪತ್ತೆಯಾಗಿದೆ.ಸಿಮೆಂಟ್ ಕಂಪೆನಿಯೊಂದು ಕೊಡುಗೆ ನೀಡಿದ ಬೃಹತ್ ಅಗೆಯುವ ಯಂತ್ರವು ಮ‌ೂರು ಮಹಡಿಯ ಕಾಲೇಜಿನ ಕಟ್ಟಡದ ಅವಶೇಷಗಳಲ್ಲಿ ಶೋಧ ನಡೆಸಿದೆ.

'ನಾವು ಅವಶೇಷಗಳಿಂದ 38 ಮಕ್ಕಳನ್ನು ಹೊರತೆಗೆದಿದ್ದು, ಕೆಲವು ಮಕ್ಕಳು ಬದುಕುಳಿದಿದ್ದಾರೆಂದು' ರಕ್ಷಣಾ ತಂಡದ ನಾಯಕ ಸುರಿಯಾ ಹೇಳಿದ್ದಾರೆ.2004ರ ಸುನಾಮಿ ಪ್ರಕೋಪವನ್ನು ನಿರ್ವಹಿಸಿದ ರೀತಿಯ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದ ಇಂಡೊನೇಶಿಯ ಅಧ್ಯಕ್ಷ ಸುಸಿಲೊ ಬಾಂಬಾಂಗ್ ಯುಧೊಯಾನೊ, ತಕ್ಷಣದ ವಿತರಣೆಗೆ 10 ಮಿಲಿಯನ್ ಡಾಲರ್ ವಿದೇಶಿ ನೆರವನ್ನು ಕೋರಿದ್ದಾರೆ.

ಇಂಡೊನೇಶಿಯದಲ್ಲಿ ತಮ್ಮ ಬಾಲ್ಯದ ಜೀವನ ಕಳೆದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಜೀವಹಾನಿಗಳಿಂದ ತಮಗೆ ತೀವ್ರ ದುಃಖವಾಗಿದ್ದಾಗಿ ತಿಳಿಸಿದ್ದು, ತಕ್ಷಣಕ್ಕೆ ಮ‌ೂರು ಲಕ್ಷ ಡಾಲರ್ ನೆರವನ್ನು ಪ್ರಕಟಿಸಿದ್ದು, ಸಂತ್ರಸ್ತರ ನೆರವಿಗೆ ಮತ್ತೆ ಮ‌ೂರು ಲಕ್ಷ ಡಾಲರ್ ಮೀಸಲಿಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ