ಹೆಸರುಳ್ಳ ಡೇರಿಯ ದನಗಳು ಹೆಸರಿಲ್ಲದ ಡೇರಿಯ ದನಗಳಿಗಿಂತ ಹೆಚ್ಚು ಹಾಲು ಕೊಡುತ್ತದೆಂದು ಕಂಡುಹಿಡಿದ ಅವಳಿ ಬ್ರಿಟನ್ ಸಂಶೋಧಕರು ಈ ವರ್ಷದ ಇಗ್ನೋಬಲ್ ಪ್ರಶಸ್ತಿಗಳನ್ನು ಗೆದ್ದ ವಿಜೇತರಲ್ಲಿ ಸೇರಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಯಾಂಡರ್ಸ್ ಥಿಯೇಟರ್‌ನಲ್ಲಿ ಗುರುವಾರ ಇಗ್ನೋಬಲ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಇಗ್ನೋಬಲ್ ಪ್ರಶಸ್ತಿಗಳು ಮೊದಲಿಗೆ ನಗುವನ್ನು ತರಿಸುತ್ತದೆ. ಬಳಿಕ ಯೋಚಿಸುವಂತೆ ಮಾಡುತ್ತದೆಂದು ಹೇಳಲಾಗುತ್ತಿದೆ. ಇಗ್ನೋಬಲ್ ಪ್ರಶಸ್ತಿ ಗೆದ್ದ ಇನ್ನಿತರ ವಿಜೇತರಲ್ಲಿ ಬಾರ್‌ನಲ್ಲಿ ಕಾದಾಟದಲ್ಲಿ ತುಂಬಿದ ಬಿಯರ್ ಸೀಸೆಗಿಂತ ಖಾಲಿ ಸೀಸೆಗಳು ಒಳ್ಳೆಯ ಅಸ್ತ್ರಗಳು ಎಂದು ಕಂಡು ಹಿಡಿದ ವಿಜ್ಞಾನಿಗಳು ಸೇರಿದ್ದಾರೆ. ಪಾಂಡಾದ ಸಗಣಿಯ ಬ್ಯಾಕ್ಟೀರಿಯ ಬಳಸಿಕೊಂಡು ಅಡುಗೆಮನೆ ತ್ಯಾಜ್ಯವನ್ನು ತಗ್ಗಿಸಿದ ಸಂಶೋಧಕರಿಗೆ, ದ್ವೀಪ ರಾಷ್ಟ್ರ ಐಸ್‌ಲ್ಯಾಂಡ್‌ನಲ್ಲಿ ಆರ್ಥಿಕ ಕುಸಿತದ ವಿರುದ್ಧ ತಮ್ಮ ಕೊಡುಗೆ ನೀಡಿದ ನಾಲ್ಕು ಬ್ಯಾಂಕುಗಳ ಕಾರ್ಯನಿರ್ವಾಹಕರು ಸೇರಿದ್ದಾರೆ.
'ರಿಸ್ಕ್' ವಿಷಯವಸ್ತುವನ್ನು ಆಯ್ದುಕೊಂಡ 19ನೇ ವಾರ್ಷಿಕ ಸಮಾರಂಭವನ್ನು ವೈಜ್ಞಾನಿಕ ಹಾಸ್ಯ ನಿಯತಕಾಲಿಕ ಆನ್ನಾಲ್ಸ್ ಆಫ್ ಇಂಪ್ರಾಬೇಬಲ್ ರಿಸರ್ಚ್ ಪ್ರಾಯೋಜಿಸಿದ್ದು, ನಿಜವಾದ ನೊಬೆಲ್ ಪ್ರಶಸ್ತಿ ಪುರಸ್ಕೃತರು ಇಗ್ನೊಬಲ್ ಪ್ರಶಸ್ತಿ ವಿತರಿಸಿದರು. ಡಾ.ಎಲೆನಾ ಬೋಡ್ನಾರ್ ತಾವು ಸಂಶೋಧಿಸಿದ ಬ್ರಾಗೆ ಪ್ರಶಸ್ತಿವಿಜೇತರಾಗಿದ್ದಾರೆ. ಒಂದು ಜತೆ ಅನಿಲ ಗವಸುಗಳಾಗಿ ಈ ಬ್ರಾವನ್ನು ಬಳಸಬಹುದಾಗಿದೆ. ಇದು ಕ್ಷುಲ್ಲಕವೆನಿಸಿದರೂ, ಈಗ ಚಿಕಾಗೊನಲ್ಲಿ ವಾಸಿಸುವ ಉಕ್ರೇನ್ ನಿವಾಸಿ 1986ರ ಚರ್ನೋಬೈಲ್ ಪರಮಾಣು ಸ್ಥಾವರ ದುರಂತದ ದುಷ್ಪರಿಣಾಮಗಳನ್ನು ಅಧ್ಯಯನ ಮಾಡುವುದರೊಂದಿಗೆ ತಮ್ಮ ವೈದ್ಯವೃತ್ತಿ ಆರಂಭಿಸಿದ್ದರು.
ಜನರಲ್ಲಿ ತಕ್ಷಣವೇ ಲಭ್ಯವಾಗುವ ಅನಿಲ ಗವಸುಗಳಿದ್ದಿದ್ದರೆ ಅಣುವಿಕಿರಣದ ಅಸ್ವಸ್ಥತೆ ಉಂಟುಮಾಡುವ ಐಯೋಡಿನ್-131 ಸೇವನೆಯನ್ನು ತಪ್ಪಿಸಬಹುದಿತ್ತೆಂದು ಅವರು ಹೇಳಿದ್ದಾರೆ. ಖಾಲಿ ಬಿಯರ್ ಸೀಸೆಗಳು ಒಳ್ಳೆಯ ಅಸ್ತ್ರವೆಂದು ಸಾಬೀತು ಮಾಡಲು ಅಧ್ಯಯನದಲ್ಲಿ ಯಾರದೇ ತಲೆಗಳ ಮೇಲೆ ಹೊಡೆದು ಪ್ರಯೋಗ ಮಾಡಿಲ್ಲ. ಬದಲಿಗೆ, ಸ್ವಿಜರ್ಲೆಂಡ್ ಬರ್ನ್ ವಿವಿಯ ವಿಧಿವಿಜ್ಞಾನ ಔಷಧ ಇಲಾಖೆ ಮುಖ್ಯಸ್ಥ ಬೋಲಿಗರ್ ಮತ್ತು ಅವರು ತಂಡವು ಅರ್ಧ ಲೀಟರ್ ಬಿಯರ್ ಸೀಸೆಗಳ ಮೇಲೆ ಸ್ಟೀಲ್ ಚೆಂಡುಗಳನ್ನು ಉರುಳಿಸಿ ಅದರ ಸಾಮರ್ಥ್ಯ ಪರೀಕ್ಷೆ ಮಾಡಿತು.
ಮಾನವಜೀವಿಗಳು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿದರೆ ಅವು ಕೂಡ ಅಕ್ಕರೆಯನ್ನು ತೋರಿಸುತ್ತದೆಂದು ಸಂಶೋಧನೆಯಿಂದ ತೋರಿಸಿರುವ ಪೀಟರ್ ರೌಲಿನ್‌ಸನ್ ಮತ್ತು ಕ್ಯಾಥೆರಿನ್ ಡೌಗ್ಲಾಸ್ ಬೆಸ್ಸಿ ಮತ್ತು ಬಟರ್‌ಕಪ್ ಎಂದು ಹೆಸರು ಹಿಡಿದು ಹಸುಗಳನ್ನು ಕರೆದರೆ ಹೆಸರಿಲ್ಲದ ಹಸುಗಳಿಗಿಂತ ಹೆಚ್ಚು ಹಾಲು ಕೊಡುತ್ತವೆಂದು ಹೇಳಿದ್ದಾರೆ.