ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಮಾಸ್ ವಿಡಿಯೊದಲ್ಲಿ ಇಸ್ರೇಲಿ ಸೈನಿಕನ ನಗುಮುಖ (Jerusalem | Hamas | Israel | Shalit)
 
ಕಳೆದ ಮ‌ೂರು ವರ್ಷಗಳಿಂದ ಇಸ್ಲಾಮಿಕ್ ಸಂಘಟನೆ ಹಮಾಸ್‌ ಸೆರೆಹಿಡಿದಿದ್ದ ಇಸ್ರೇಲಿ ಸೈನಿಕನ ವಿಡಿಯೊ ಚಿತ್ರವನ್ನು ಇಸ್ರೇಲಿಗೆ ಶುಕ್ರವಾರ ಹಸ್ತಾಂತರಿಸಲಾಗಿದ್ದು, ವಿಡಿಯೊ ಚಿತ್ರದಲ್ಲಿ ಸೈನಿಕ ಆರೋಗ್ಯಕರವಾಗಿ ಕಂಡುಬಂದಿದ್ದು, ಕಿರುನಗೆ ಸೂಸುತ್ತಿದ್ದನೆಂದು ತಿಳಿದುಬಂದಿದೆ.

2006ರಲ್ಲಿ ಹಮಾಸ್ ಅಪಹರಿಸಿದ್ದ ಗಿಲಾಡ್ ಶಾಲಿತ್ ಅರೇಬಿಕ್ ಭಾಷೆಯ ಸುದ್ದಿಪತ್ರಿಕೆ 'ಪ್ಯಾಲೆಸ್ಟೀನ್' ಕೈಯಲ್ಲಿ ಹಿಡಿದಿದ್ದು, 20 ಪ್ಯಾಲೆಸ್ಟೀನ್ ಮಹಿಳೆಯರನ್ನು ಇಸ್ರೇಲ್ ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಇಸ್ರೇಲಿ ಸೈನಿಕ ಜೀವಂತವಿರುವುದನ್ನು ಸಾಬೀತು ಮಾಡಿದೆ. ಬಿಳಿಯ ಬಣ್ಣದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದ 23 ವರ್ಷ ವಯಸ್ಸಿನ ಸೈನಿಕ ಹೆಬ್ರಿವ್ ಭಾಷೆಯಲ್ಲಿ ಹೇಳಿಕೆಯನ್ನು ಓದಿದ.

ಅವನ ಧ್ವನಿ ಕ್ಷೀಣವಾಗಿದ್ದರೂ ಶಾಂತ ಮತ್ತು ಆರೋಗ್ಯಯುಕ್ತನಾಗಿ ಕಂಡುಬಂದ. ತಮ್ಮನ್ನು ಸೆರೆಹಿಡಿದವರು ಚೆನ್ನಾಗಿ ನೋಡಿಕೊಂಡರೆಂದು ಅವನು ವಿಡಿಯೊದಲ್ಲಿ ತಿಳಿಸಿದ್ದಾನೆ. ತಮ್ಮ ಬಿಡುಗಡೆಗೆ ಸುದೀರ್ಘ ಕಾಲದಿಂದ ಕಾಯುತ್ತಿದ್ದೆ. ಬೆಂಜಮಿನ್ ನೆತಾನ್‌ಯಾಹು ನೇತೃತ್ವದ ಪ್ರಸಕ್ತ ಸರ್ಕಾರ, ಒಪ್ಪಂದ ಕುದುರಿಸುವ ಅವಕಾಶ ಕಳೆದುಕೊಳ್ಳುವುದಿಲ್ಲವೆಂದು ಆಶಿಸುವುದಾಗಿ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ