ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫಿಲಿಪ್ಪೀನ್ಸ್‌: 'ಟೆಕ್ಸಾನ' ಬಳಿಕ 'ಪಾರ್ಮಾ' ಚಂಡಮಾರುತ (Philippines | Parma | Taiwan | Ketsana)
 
ಫಿಲಿಪ್ಪೀನ್ಸ್‌ ರಾಷ್ಟ್ರವನ್ನು ತತ್ತರಿಸುವಂತೆ ಮಾಡಿದ ಸೆ.26ರ ಚಂಡಮಾರುತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕೇವಲ 8 ದಿನಗಳ ಅಂತರದಲ್ಲೇ ಎರಡನೇ ಚಂಡಮಾರುತ ಅಲ್ಲೋಲಕಲ್ಲೋಲ ಉಂಟುಮಾಡಿದೆ. ಪ್ರಬಲ ಬಿರುಗಾಳಿಯಿಂದ ವಿದ್ಯುತ್ ಕಂಬಗಳು, ಮರಗಳು ಶನಿವಾರ ಉರುಳಿಬಿತ್ತೆಂದು ವರದಿಯಾಗಿದೆ.

40 ವರ್ಷಗಳಲ್ಲೇ ಭೀಕರ ಪ್ರವಾಹ ಉಂಟುಮಾಡಿದ ಸೆ.26ರ ಚಂಡಮಾರುತದಿಂದ ಫಿಲಿಪ್ಪೀನ್ಸ್ ಇನ್ನೂ ನಲುಗುತ್ತಿದ್ದು 288 ಜನರು ಬಲಿಯಾಗಿದ್ದಾರೆ. ಹೊಸ ಚಂಡಮಾರುತ ಪಾರ್ಮಾ ಲುಜೋನ್ ದ್ವೀಪದತ್ತ ತೆರಳದೇ ಕೊಂಚಮಟ್ಟಿಗೆ ಮಾರ್ಗ ಬದಲಿಸಿದ್ದರಿಂದ ವಿನಾಶದ ಅಪಾಯ ಕುಂಠಿತಗೊಂಡಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ.

ಫಿಲಿಪ್ಪೀನ್‌ಗೆ ಶುಭಸುದ್ದಿಯಾಗಿರುವುದು ತೈವಾನ್‌ಗೆ ಕೆಟ್ಟ ಸುದ್ದಿಯಾಗಿದ್ದು, ತೈವಾನ್ ಚಂಡಮಾರುತದ ಮುನ್ಸೂಚನೆ ನೀಡಿದ್ದು, ಕಾವೊಸಿಂಗ್ ಕೌಂಟಿಯ ಗ್ರಾಮಗಳಿಂದ ಜನರನ್ನು ಸ್ಥಳಾಂತರ ಮಾಡಿದ್ದಾರೆ. ಕಳೆದ ಬಾರಿ ಬಡಿದ ಚಂಡಮಾರುತದಲ್ಲಿ ಸುಮಾರು 700 ಜನರು ಕಾವೊಸಿಂಗ್‌ನಲ್ಲಿ ಬಲಿಯಾಗಿದ್ದರು.ಕಳೆದ ತಿಂಗಳು ಚಂಡಮಾರುತ ಟೆಕ್ಸಾನದ ಅಬ್ಬರಕ್ಕೆ 30 ಲಕ್ಷ ಜನರ ಮನೆಗಳು ಹಾನಿಯಾಗಿದ್ದು, ಆಗ್ನೇಯ ಏಷ್ಯಾ ರಾಷ್ಟ್ರಗಳಿಗೂ ಕೆಟ್ಸಾನಾ ಹಾನಿ ಮಾಡಿದ್ದು, ವಿಯೆಟ್ನಾಂನಲ್ಲಿ 99, ಕಾಂಬೋಡಿಯದಲ್ಲಿ 14 ಮತ್ತು ಲಾವೋಸ್‌ನಲ್ಲಿ 16 ಜನರು ಸತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ