ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ದಾಳಿಗೆ 8 ಅಮೆರಿಕ ಯೋಧರು ಹತ (Afghan | US forces | Al-Qaida | Taliban)
 
ಅಮೆರಿಕದ ಪಡೆಗಳು ತಂಗಿದ್ದ ಹೊರವಲಯದ ಸೇನಾಚೌಕಿಗಳ ಮೇಲೆ ನೂರಾರು ತಾಲಿಬಾನ್ ಉಗ್ರಗಾಮಿಗಳು ಮುತ್ತಿಗೆ ಹಾಕಿ 8 ಜನ ಸೈನಿಕರನ್ನು ಕೊಂದಿದ್ದು, ಆಫ್ಘಾನಿಸ್ತಾನದ 8 ವರ್ಷಗಳ ಯುದ್ಧದ ಅವಧಿಯಲ್ಲಿ ಅಮೆರಿಕ ಪಡೆಗಳು ಅನುಭವಿಸಿದ ಅಧಿಕ ರಕ್ತಪಾತದ ದಿನಗಳಾಗಿವೆ.

ಪೂರ್ವ ನುರಿಸ್ಟಾನ್ ಪ್ರಾಂತ್ಯದ ಮಸೀದಿ ಮತ್ತು ಗ್ರಾಮವೊಂದರಿಂದ ಬೆಟ್ಟದ ಮ‌ೂಲಕ ಇಳಿದ ಉಗ್ರಗಾಮಿಗಳು ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರಿಗೆ ಸ್ವರ್ಗವಾದ ಪರ್ವತಮಯ ಗಡಿ ಪ್ರದೇಶದಲ್ಲಿರುವ ಎರಡು ಸೇನಾಚೌಕಿಗಳ ಮೇಲೆ ಶನಿವಾರ ದಾಳಿ ಮಾಡಿತು.

ದಾಳಿಯನ್ನು ಪ್ರತಿರೋಧಿಸಿದ ಅಮೆರಿಕ ಪಡೆಗಳು ವಾಯುದಾಳಿ ನಡೆಸಿದ್ದರಿಂದ ಹೋರಾಟ ರಾತ್ರಿಯವರೆಗೆ ನಡೆಯಿತೆಂದು ಅಂತಾರಾಷ್ಟ್ರೀಯ ಭದ್ರತಾ ಸಹಾಯಕ ಪಡೆ ತಿಳಿಸಿದ್ದು, ಇದೊಂದು ಕಠಿಣ ಹೋರಾಟವೆಂದು ಹೇಳಿದ್ದಾರೆ. ಸಮ್ಮಿಶ್ರ ಪಡೆಗಳು ದಾಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ, ಶತ್ರುಪಾಳೆಯದಲ್ಲೂ ಭಾರೀ ಸಾವು ನೋವು ಉಂಟಾಗಿದೆ.

30 ವಿದೇಶಿ ಮತ್ತು ಆಫ್ಘನ್ ಪಡೆಗಳು ಹತರಾಗಿದ್ದಾರೆಂದು ತಾಲಿಬಾನ್ ವಕ್ತಾರ ಹೇಳಿದ್ದು, ಕಾಮದೇಶ್ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಮತ್ತು 30 ಆಫ್ಘನ್ ರಾಷ್ಟ್ರೀಯ ಸೇನೆ ಸೈನಿಕರನ್ನು ಸೆರೆಹಿಡಿದಿರುವುದಾಗಿ ತಿಳಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ