ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜನಾಂಗೀಯ ನಿಂದನೆಗೆ ಕುಸ್ತಿಪಟುಗಳಿಂದ ತಕ್ಕಪಾಠ (Melbourne | Wrestlers | Skaters | Epping)
 
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಕುಸ್ತಿಪಟುಗಳಿಗೆ ಜನಾಂಗೀಯ ನಿಂದನೆಗಳನ್ನು ಮಾಡಿದ ಸ್ಕೇಟರ್‌ಗಳ ತಂಡಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು, ಭಾರತೀಯ ಕುಸ್ತಿಪಟುಗಳು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಇಬ್ಬರಿಗೆ ಗಾಯಗಳಾಗಿವೆ.ಸ್ಕೇಟರ್ ತನ್ನ ಬೋರ್ಡ್‌ನಿಂದ ಕುಸ್ತಿಪಟುವಿನ ಕಾರಿನ ಬದಿಯ ಕಿಟಕಿಗೆ ಬಡಿದಿದ್ದರಿಂದ ಎರಡು ಗುಂಪುಗಳ ನಡುವೆ ಹೊಯ್‌ಕೈ ಆರಂಭವಾಯಿತು.

ಎಪ್ಪಿಂಗ್‌ನಲ್ಲಿ ಕಬಡ್ಡಿ ಪಂದ್ಯಾವಳಿಯಿಂದ ಹಿಂತಿರುಗುತ್ತಿದ್ದ ಕುಸ್ತಿಪಟುಗಳತ್ತ ಸಂಜೆ 5.30ಕ್ಕೆ ಮೆಡೊಗ್ಲೆನ್ ಸ್ಟೇಡಿಯಂ ಬಳಿಯ ಕಾರ್‌ಪಾರ್ಕ್‌ ಬಳಿ ಸ್ಕೇಟರೊಬ್ಬ ನಿಂದಿಸಲು ಆರಂಭಿಸಿದ ನಂತರ ಕಾರಿನ ಗಾಜನ್ನು ಒಡೆದಿದ್ದರಿಂದ ಕಾರಿನಲ್ಲಿದ್ದ ಜನರು ಹಿಗ್ಗಾಮುಗ್ಗಾ ಥಳಿಸಿದರೆಂದು ಇನ್ಸ್‌ಪೆಕ್ಟರ್ ಮಾರ್ಕ್ ಡೋನಿ ಹೇಳಿದ್ದಾರೆ.ಸ್ಕೇಟ್‌ಪಾರ್ಕ್‌ನಿಂದ ಇನ್ನೂ ಕೆಲವು ಅವನ ಸಂಗಡಿಗರು ಆಗಮಿಸಿದಾಗ ಜಗಳ ವಿಕೋಪಕ್ಕೆ ತಿರುಗಿ ಇನ್ನೂ ಕೆಲವರಿಗೆ ಪೆಟ್ಟು ಬಿದ್ದಿತು.

ಸುಮಾರು 25 ಮತ್ತು 42 ವರ್ಷ ವಯಸ್ಸಿನ ಇಬ್ಬರನ್ನು ಕೋಲುಗಳಿಂದ ಥಳಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ನಾರ್ಧನ್ ಆಸ್ಪತ್ರೆಗೆ ಒಯ್ಯಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ