ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೊಸ ಹೆಸರಿನ ಉಗ್ರರ ಗುಂಪುಗಳಿಗೆ ತಟ್ಟಿದ ಬಿಸಿ (Pak | Terror outfits | Jaish | Lashkar)
 
ಹೊಸ ಹೆಸರಿನೊಂದಿಗೆ ಕಾರ್ಯಾಚರಣೆಗಿಳಿಯುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನನ್ನು ವಿಸ್ತರಿಸುವ ಸುಗ್ರೀವಾಜ್ಞೆಯೊಂದನ್ನು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಶುಕ್ರವಾರ ಹೊರಡಿಸಿದ್ದಾರೆ. ಹೊಸ ನಾಮಾಂಕಿತದೊಂದಿಗೆ ವೇಷಮರೆಸಿಕೊಂಡು ಚಟುವಟಿಕೆ ನಡೆಸುವ ಉಗ್ರಗಾಮಿ ಸಂಘಟನೆಗಳಿಗೆ ಇದರಿಂದ ಬಿಸಿಮುಟ್ಟಿದೆ.

ಲಷ್ಕರೆ ತೊಯ್ಬಾ ಮತ್ತು ಜೈಷೆ ಮೊಹಮದ್ ಮುಂತಾದ ಸಂಘಟನೆಗಳ ಮೇಲೆ ಇದು ಗಮನಾರ್ಹ ಪರಿಣಾಮ ಬೀರಿದೆ. 1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸುಗ್ರೀವಾಜ್ಞೆಯು ತಕ್ಷಣವೇ ಜಾರಿಗೆ ಬರಲಿದ್ದು, ನಿಷೇಧಿತ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಅಥವಾ ಸಹಯೋಗಿಗಳು ಬೇರೆ ಹೆಸರಿನಲ್ಲಿ ಹೊಸ ಸಂಘಟನೆ ರಚಿಸಿ ಮುಂಚಿನ ರೀತಿಯ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಕಂಡುಬಂದರೆ, ಅಂತಹ ಸಂಘಟನೆಯನ್ನು ಕೂಡ ಬಹಿಷ್ಕೃತ ಸಂಘಟನೆಯೆಂದು ಪರಿಗಣಿಸಲಾಗುತ್ತೆದೆಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.

ಬಳಿಕ ಸರ್ಕಾರವು ನಿಷೇಧಿತ ಸಂಘಟನೆಯ ಸದಸ್ಯರು ರಚಿಸಿದ ಹೊಸ ಗುಂಪಿನ ನಿಷೇಧ ಪ್ರಕಟಣೆಗೆ ಔಪಚಾರಿಕ ಪ್ರಕಟಣೆ ನೀಡುತ್ತದೆಂದು ಸರ್ಕಾರ ತಿಳಿಸಿದೆ. 30 ದಿನಗಳ ರಿಮ್ಯಾಂಡ್ ಅವಧಿಯ ನಿಯಮದ ಹಿನ್ನೆಲೆಯಲ್ಲಿ ಭಯೋತ್ಪಾದಕ ಶಂಕಿತರು ಮುಕ್ತವಾಗಿ ಹೊರಹೋಗುವುದರಿಂದ ಭಯೋತ್ಪಾದನೆ ನಿಗ್ರಹ ಕಾಯ್ದೆಯ ತಿದ್ದುಪಡಿಯಾದ ಸುಗ್ರೀವಾಜ್ಞೆಯಲ್ಲಿ ರಿಮ್ಯಾಂಡ್ ಅವಧಿಯನ್ನು 30 ದಿನಗಳಿಂದ 90 ದಿನಗಳಿಗೆ ವಿಸ್ತರಿಸಲಾಗಿದೆ.

ಹೊಸ ಸುಗ್ರೀವಾಜ್ಞೆಯಲ್ಲಿ ಭಯೋತ್ಪಾದನೆಯೆಂಬ ಪದವನ್ನು ಮರುವ್ಯಾಖ್ಯಾನಿಸಿ, ವಿಸ್ತರಿಸಲಾಗಿದೆ. ಭಯೋತ್ಪಾದನೆಗೆ ಆರ್ಥಿಕ ನೆರವು, ತಾತ್ವಿಕ ನೆರವು, ನೇರವಾಗಿ ಅಥವಾ ಪರೋಕ್ಷವಾಗಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಭಯೋತ್ಪಾದಕರೆಂದು ಪರಿಗಣಿಸಲಿದ್ದು, ಭಯೋತ್ಪಾದನೆ ಚಟುವಟಿಕೆ ನಡೆಸುವ ಇತರೆ ಭಯೋತ್ಪಾದಕರಿಗೆ ಸಮಾನವಾಗಿ ಶಿಕ್ಷಿಸಲಾಗುವುದು.
ಸಂಬಂಧಿತ ಮಾಹಿತಿ ಹುಡುಕಿ