ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮ ಕಚೇರಿಯಲ್ಲಿ ಸೋಮವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಸತ್ತಿದ್ದು 4 ಮಂದಿ ಗಾಯಗೊಂಡಿದ್ದಾರೆ.
ಸತ್ತವರಲ್ಲಿ ಒಬ್ಬರನ್ನು ವಿದೇಶಿಯರೆಂದು ಗುರುತಿಸಲಾಗಿದ್ದು, ಇನ್ನೊಬ್ಬರು ಪಾಕಿಸ್ತಾನಿ ಮಹಿಳೆಯೆಂದು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಕ್ತಾರ ಮತ್ತು ವೈದ್ಯರಾದ ವಾಸೀಂ ಕ್ವಾಜಾ ತಿಳಿಸಿದ್ದಾರೆ. ಡಬ್ಲ್ಯುಎಫ್‌ಪಿ ಕಚೇರಿಯಲ್ಲಿ ಬಾಂಬ್ ಹುದುಗಿಸಿಡಲಾಗಿತ್ತೆಂದು ವಿಶ್ವಸಂಸ್ಥೆ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.
ಬಾಂಬ್ ಸ್ಫೋಟದಿಂದ ಕಟ್ಟಡ ಛಿದ್ರಛಿದ್ರವಾಗಿದೆ. ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟದ ಘಟನೆಗಳು ಸರ್ವೇಸಾಮಾನ್ಯವಾಗಿದ್ದು, ವಾಯವ್ಯ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ವಿರುದ್ಧ ಪಾಕಿಸ್ತಾನ ಭದ್ರತಾ ಪಡೆ ಹೋರಾಡುತ್ತಿದೆ.