ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಿವಿಯಿಂದ ಕಾಣುವ ಅಂಧಬಾಲಕ 'ಬ್ಯಾಟ್‌ಬಾಯ್' (Batboy | Lucas | Blind | Clicking)
 
ಲಂಡನ್ನಿನ ಏಳು ವರ್ಷ ವಯಸ್ಸಿನ ಕುರುಡು ಬಾಲಕನಿಗೆ ಬ್ಯಾಟ್‌ಬಾಯ್ ಎಂದೇ ಅಡ್ಡಹೆಸರು ಇಡಲಾಗಿದ್ದು, ತನ್ನ ಕಿವಿಗಳನ್ನು ಬಳಸಿ ವಸ್ತುಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ್ದಾನೆ. ಹುಟ್ಟುಕುರುಡಾಗಿರುವ ಲುಕಾಸ್ ಮರ್ರೆ ತನ್ನ ಸುತ್ತಮುತ್ತಲಿನ ವಸ್ತುಗಳನ್ನು ಪ್ರತಿಧ್ವನಿಗಳ ಆಧಾರದ ಮೇಲೆ ಗ್ರಹಿಸುವ ಬ್ರಿಟನ್ನಿನ ಪ್ರಥಮ ಬಾಲಕನೆಂದು ನಂಬಲಾಗಿದೆ.

ತನ್ನ ಬಾಯಿ ಮೇಲ್ಭಾಗದಲ್ಲಿ ನಾಲಗೆಯನ್ನು ಕ್ಲಿಕ್ಕಿಸುವ ಮ‌ೂಲಕ ಹೊರಡುವ ಪ್ರತಿಧ್ವನಿಯಿಂದ ವಸ್ತುಗಳು ಎಲ್ಲಿವೆಯೆಂದು ಗುರುತಿಸುತ್ತಿದ್ದ. ಈ ತಂತ್ರದಿಂದ ಮೈದಾನದಲ್ಲಿ ಆಟವಾಡಲು, ಬ್ಯಾಸ್ಕೆಟ್‌ಬಾಲ್ ಆಡಲು ಮತ್ತು ರಾಕ್ ಕ್ಲೈಂಬಿಂಗ್ ಮಾಡಲು ಅವನಿಗೆ ಅವಕಾಶವಾಗುತ್ತಿದೆ. ಕ್ಲಿಕಿಂಗ್ ವ್ಯವಸ್ಥೆಯನ್ನು ತಾನು ನಿಜವಾಗಲು ಇಷ್ಟಪಟ್ಟಿದ್ದು, ಅದನ್ನು ಕಲಿಯುವುದು ಮಾತ್ರ ತುಂಬ ಕಷ್ಟವೆಂದು ಬಾಲಕ ಹೇಳಿದ್ದಾನೆ.

ತಾನು ಬ್ಯಾಸ್ಕೆಟ್‌ಬಾಲ್ ಆಟ ಇಷ್ಟಪಡುವುದಾಗಿಯ‌ೂ ಮತ್ತು ಕ್ಲಿಕ್ ಮ‌ೂಲಕ ಎಲ್ಲಿ ಹೂಪ್ ಇರುತ್ತದೆಂದು ಪತ್ತೆಹಚ್ಚಿ ಚೆಂಡನ್ನು ಎಸೆಯುತ್ತಿದ್ದುದಾಗಿ ಅವನು ವಿವರಿಸಿದ್ದಾನೆ. ಪ್ರತಿಧ್ವನಿ ಮ‌ೂಲಕ ವಸ್ತುವನ್ನು ಪತ್ತೆಹಚ್ಚುವ ಎಕೊಲೊಕೇಶನ್ ತಂತ್ರವು ಬಾವಲಿಗಳು ಮತ್ತು ಡಾಲ್ಫಿನ್‌ಗಳು ಬಳಸುವ ತಂತ್ರಕ್ಕೆ ಸಮನಾಗಿದೆ.

ಪ್ರತಿಧ್ವನಿ ಬರುವ ಸಮಯದ ಆಧಾರದ ಮೇಲೆ ಬಾಲಕ ವಸ್ತು ಎಷ್ಟು ದೂರದಲ್ಲಿದೆಯೆಂದು ಪತ್ತೆಹಚ್ಚುತ್ತಿದ್ದ. ಪ್ರತಿಧ್ವನಿಯ ತೀವ್ರತೆಯಿಂದ ವಸ್ತುವಿನ ಗಾತ್ರವನ್ನು ನಿರ್ಧರಿಸುತ್ತಿದ್ದ.ಕ್ಯಾಲಿಫೋರ್ನಿಯದ ಅಂಧ ವ್ಯಕ್ತಿ 41 ವರ್ಷದ ಡೇನಿಯಲ್ ಕಿಶ್ ಬಾಲಕನಿಗೆ ಈ ತಂತ್ರವನ್ನು ಬೋಧಿಸಿದ್ದು, ಅವರು ಅಂಧ ದತ್ತಿಗೆ ವರ್ಲ್ಡ್ ಅಕ್ಸೆಸ್ ಸ್ಥಾಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ