ಭಾರತದ ಜನಜೀವನದಲ್ಲಿ ಮಾರ್ಪಾಟು ಉಂಟುಮಾಡುವ ಉತ್ತಮ ಸಂಶೋಧನೆಗೆ 10 ಲಕ್ಷ ರೂ. ಪ್ರಶಸ್ತಿ ನೀಡುವುದಾಗಿ ಪ್ರಿಯದರ್ಶಿನಿ ಅಕಾಡೆಮಿಯ ನಿರ್ದೇಶಕ ನಾನಿಕ್ ರುಪಾನಿ ತಿಳಿಸಿದ್ದಾರೆ. ಇದರಿಂದಾಗಿ ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣಪ್ರದೇಶಗಳಲ್ಲಿ ಕಡೆಗಣಿಸಲಾದ ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆಯೆಂದು ರುಪಾನಿ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತೀಯರು ಗುರುತಿಸಲ್ಪಟ್ಟಿದ್ದು, ಭಾರತೀಯ ಯುವಕರಲ್ಲಿ ಪ್ರತಿಭೆಗಳಿಗೆ ಕಡಿಮೆಯಿಲ್ಲವೆಂದು ಹೇಳಿದ ಅವರು, ಯುವ ಸಾಹಸಶೀಲ ಸಮುದಾಯಕ್ಕೆ ಇದು ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆಂದು ಅವರು ಹೇಳಿದ್ದಾರೆ. ಸೆ.19ರಂದು ನಡೆಯುವ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಗುವುದು ಎಂದು ಅವರು ನುಡಿದಿದ್ದಾರೆ.
ಬ್ರಿಟನ್ ಉಪಪ್ರಧಾನಿ ಜಾನ್ ಪ್ರೆಸ್ಕಾಟ್, ಇಂಡೊನೇಶಿಯ ಮಾಜಿ ಅಧ್ಯಕ್ಷೆ ಮೆಗಾವತಿ ಸುಕರ್ಣೊಪುತ್ರಿ, ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸ್ಪೀಕರ್ ಫ್ರೆನೆ ಗ್ಲೆನ್‌ವಾಲಾ ಮತ್ತು ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಮುಂಚಿನ ವರ್ಷಗಳಲ್ಲಿ ಪ್ರಶಸ್ತಿ ಪಡೆದವರು.