ದುಬೈನ ತನ್ನ ನಿವಾಸದಲ್ಲಿ ಇನ್ನೊಬ್ಬ ಭಾರತೀಯ ವಲಸೆಗಾರ ನೇಣಿನ ಕುಣಿಕೆಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇವಲ ಒಂದು ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಎರಡನೇ ಭಾರತೀಯ ಕಾರ್ಮಿಕನೆಂದು ಹೇಳಲಾಗಿದೆ.
ಸೇಲ್ಸ್‌ಮನ್ ಕೆಲಸ ಮಾಡುತ್ತಿದ್ದ ತಮ್ಮ ಸೋದರ ಸ್ವದೇಶದಲ್ಲಿರುವ ಅವನ ಕುಟುಂಬದಲ್ಲಿ ಸಮಸ್ಯೆಗಳಿದ್ದರಿಂದ ಆತ್ಮಹತ್ಯೆ ಮಾಡಿಕೊಂಡನೆಂದು ಮೃತನ ಸೋದರ ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆ ಸ್ವದೇಶದಲ್ಲಿ ರಜಾ ಮುಗಿಸಿಕೊಂಡು ಅವನು ದುಬೈಗೆ ಹಿಂತಿರುಗಿದ್ದ.
ಕೊಲ್ಲಿ ದೇಶಗಳಲ್ಲಿ ಭಾರತೀಯರ ಆತ್ಮಹತ್ಯೆಗೆ ಉದ್ಯೋಗ ನಷ್ಟ ಮತ್ತು ಮನೆಯಿಂದ ಹೆಚ್ಚಿನ ಹಣಕ್ಕಾಗಿ ಒತ್ತಾಯ ಮುಂತಾದವು ಕಾರಣಗಳೆಂದು ನಂಬಲಾಗಿದೆ.