ಟಿಬೆಟ್ ಧಾರ್ಮಿಕ ನಾಯಕ ದಲೈ ಲಾಮಾ ಅವರು ಅಮೆರಿಕಕ್ಕೆ ಐದು ದಿನಗಳ ಪ್ರವಾಸದ ಸಂದರ್ಭದಲ್ಲಿ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭೇಟಿಯಾಗುವುದಿಲ್ಲವೆಂದು ತಿಳಿದುಬಂದಿದೆ. ಟಿಬೆಟ್ ಧಾರ್ಮಿಕ ನಾಯಕರು ವಾಷಿಂಗ್ಟನ್‌ಗೆ ಭೇಟಿ ನೀಡಿದರೂ ಅಮೆರಿಕದ ಅಧ್ಯಕ್ಷರನ್ನು ಕಾಣದಿರುವುದು ಇದೇ ಮೊದಲ ಬಾರಿಯೆಂದು ಹೇಳಲಾಗಿದೆ.
ದಲೈಲಾಮಾ ಅವರನ್ನು ಭೇಟಿ ಮಾಡುವುದಕ್ಕೆ ಮುಂಚಿತವಾಗಿ ಚೀನದ ನಾಯಕ ಹು ಜಿಂಟಾವೊ ಅವರನ್ನು ನವೆಂಬರ್ ಶೃಂಗಸಭೆಯಲ್ಲಿ ಒಬಾಮಾ ಭೇಟಿ ಮಾಡುವುದನ್ನು ನಿರೀಕ್ಷಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಟಿಬೆಟ್ ಕುರಿತ ನಿಲುವಿನ ಬಗ್ಗೆ ವಿವರಿಸಲು ಒಬಾಮಾ ಹಿರಿಯ ಸಲಹೆಗಾರ ವೆಲೇರಿ ಜಾರೆಟ್ ಮತ್ತು ವಿದೇಶಾಂಗ ಇಲಾಖೆ ಅಧೀನಕಾರ್ಯದರ್ಶಿ ಮಾರಿಯ ಒಟೆರೊ ಭಾರತದ ಧರ್ಮಶಾಲಾಗೆ ಭೇಟಿ ನೀಡಿದ್ದಾಗ ಹಿಂದಿನ ರೂಢಿಯನ್ನು ಮುರಿಯುವ ಮತ್ತು ಯಾವುದೇ ಭೇಟಿಯನ್ನು ವಿಳಂಬಿಸುವ ನಿರ್ಧಾರವನ್ನು ದಲೈಲಾಮಾಗೆ ತಿಳಿಸಲಾಗಿತ್ತು.
ಅಮೆರಿಕ-ಚೀನ ಶೃಂಗಸಭೆಯ ಬಳಿಕ ದಲೈಲಾಮಾ ಮತ್ತು ಒಬಾಮಾ ಆಡಳಿತವು ಪರಸ್ಪರ ಭೇಟಿಯಾಗಲು ಒಪ್ಪಿದ್ದಾರೆಂದು ಧಾರ್ಮಿಕ ನಾಯಕರ ಪರ ವಕ್ತಾರ ಸೌಂಡರ್ಸ್ ತಿಳಿಸಿದ್ದಾರೆ.