ಗ್ರೀಸ್‌ನ ಹೊಸ ಸಮಾಜವಾದಿ ಪ್ರಧಾನಮಂತ್ರಿ ಜಾರ್ಜ್ ಪಪಾಂಡ್ರೊ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದು, ದೇಶವನ್ನು ಆರ್ಥಿಕ ಹಿಂಜರಿಕೆಯಿಂದ ಪಾರುಮಾಡುವ ಗುರಿಹೊಂದಿರುವ ಕ್ಯಾಬಿನೆಟ್ ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆರ್ಕ್‌ಬಿಷಪ್ ಲೆರೊನಿಮೋಸ್ ಅಧ್ಯಕ್ಷ ಕರೊಲಾಸ್ ಪಪೊಲಿಯಾಸ್ ಸಮ್ಮುಖದಲ್ಲಿ ಪ್ರಮಾಣವಚನ ಬೋಧಿಸಿದರು. ಭಾನುವಾರ ನಡೆದ ಚುನಾವಣೆಯಲ್ಲಿ ಪಪಾಂಡ್ರೊ ಪಸೊಕ್ ಪಕ್ಷವು ಶೇ.44 ಮತಗಳನ್ನು ಗಳಿಸಿ ಕನ್ಸರ್ವೇಟಿವ್ ಪಕ್ಷವನ್ನು ಅಧಿಕಾರದಿಂದ ಕೆಳಕ್ಕಿಳಿಸಿದೆ.
ಪ್ರಸಕ್ತ 16 ಸಚಿವಾಲಯಗಳಿದ್ದು, ಹೊಸ ನಾಯಕರು ಪೌರರ ಹಕ್ಕುಗಳು, ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ನೀತಿಗಳಿಗೆ ಗಮನ ನೀಡುವ ಭರವಸೆಗಳಿಗೆ ಮಾದರಿಯಾಗಿ ಸಚಿವಸಂಪುಟವನ್ನು ಮರುರೂಪಿಸುತ್ತಾರೆಂದು ನಿರೀಕ್ಷಿಸಲಾಗಿದೆ.