ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘನ್‌ನಿಂದ ಪಡೆಗಳ ವಾಪಸಿಗೆ ಗೇಟ್ಸ್ ವಿರೋಧ (Robert Gates | Afghanistan | Jihad)
 
ಆಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವ ಯಾವುದೇ ಕ್ರಮವನ್ನು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತೀವ್ರವಾಗಿ ವಿರೋಧಿಸಿದ್ದಾರೆ. ಇಂತಹ ನಿರ್ಧಾರದಿಂದ ಅಲ್ ಖಾಯಿದಾ ಆಫ್ಘಾನಿಸ್ತಾನದಲ್ಲಿ ನೆಲೆಯ‌ೂರಲು ಅವಕಾಶ ಕಲ್ಪಿಸುತ್ತದೆಂದು ಹೇಳಿದ್ದು, ಆಫ್ಘನ್-ಪಾಕ್ ಗಡಿಯ ಮಧ್ಯೆಯಿರುವ ಬುಡಕಟ್ಟು ಪ್ರದೇಶವನ್ನು ಜಿಹಾದ್‌ನ ಆಧುನಿಕ ಕೇಂದ್ರಬಿಂದುವೆಂದು ಬಣ್ಣಿಸಿದ್ದಾರೆ.

ಒಬಾಮಾ ಆಡಳಿತವು ಆಫ್ಘನ್-ಪಾಕ್ ನೀತಿಯನ್ನು ಪರಾಮರ್ಶೆ ನಡೆಸುತ್ತಿರುವ ನಡುವೆ, ಆಫ್ಘಾನಿಸ್ತಾನಕ್ಕೆ ಹೆಚ್ಚು ಪಡೆಯನ್ನು ಸೇರಿಸುವಂತೆ ಜನರಲ್‌ಗಳ ಒತ್ತಾಯದ ಹಿನ್ನೆಲೆಯಲ್ಲಿ ಗೇಟ್ಸ್ ಪ್ರತಿಕ್ರಿಯೆ ಹೊರಬಿದ್ದಿದೆ.

ಅಲ್ ಖಾಯಿದಾ ಮತ್ತು ತಾಲಿಬಾನ್ ಸೋಲಿಸುವ ಕಾರ್ಯಾಚರಣೆ ಸಾಧಿಸುವ ಮುನ್ನವೇ ಆಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳ ವಾಪಸಾತಿಯಿಂದ ಜಗತ್ತಿನ ಇತರೆ ಭಾಗಗಳಲ್ಲಿ ಇಸ್ಲಾಮಿಕ್ ಮ‌ೂಲಭೂತವಾದಿ ಚಳವಳಿಗೆ ಕುಮ್ಮಕ್ಕು ನೀಡುತ್ತದೆಂದು ಗೇಟ್ಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಯೋತ್ಪಾದಕ ಗುಂಪುಗಳು ರಷ್ಯನ್ನರಿಗಾದ ಗತಿಯನ್ನೇ ಅಮೆರಿಕ ಪಡೆಗಳಿಗೂ ಉಂಟುಮಾಡುವ ಗುರಿ ಹೊಂದಿವೆಯೆಂದು ರಕ್ಷಣಾ ಕಾರ್ಯದರ್ಶಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ