ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರುವಾಂಡಾ ಹತ್ಯಾಕಾಂಡ ಆರೋಪಿ ಬಂಧನ (Rwanda | Kampala | Uganda)
 
1994ರ ರುವಾಂಡ ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿದ್ದ ಮಾಜಿ ಸೇನಾ ಕ್ಯಾಪ್ಟನ್ ಮತ್ತು ಹಿರಿಯ ಗುಪ್ತಚರ ಅಧಿಕಾರಿ ಇಡೆಲ್‌ಫೋನ್ಸ್ ನಿಜೆಯಿಮಾನಾ ಅವರನ್ನು ಬಂಧಿಸಲಾಗಿದೆಯೆಂದು ಉಗಾಂಡಾ ಪೊಲೀಸರು ತಿಳಿಸಿದ್ದಾರೆ. ನಕಲಿ ಪ್ರವಾಸಿ ದಾಖಲೆಗಳನ್ನು ಬಳಸಿ ನಿಜೆಯಿಮಾನಾ ನೆರೆಯ ಕಾಂಗೊ ಮ‌ೂಲಕ ಉಗಾಂಡಾ ಪ್ರವೇಶಿಸಿರಬಹುದೆಂದು ಉಗಾಂಡಾ ಪೊಲೀಸ್ ವಕ್ತಾರೆ ಜುಡಿತ್ ನಬಕೂಬಾ ಶಂಕಿಸಿದ್ದಾರೆ.

ನಿಜೆಯಿಮಾನಾ ಅವರನ್ನು ರುವಾಂಡಾದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯಿರುವ ತಾಂಜಾನಿಯದ ಅರುಶಾಗೆ ಕರೆದೊಯ್ಯಲಾಗಿದೆ. 1994ರಲ್ಲಿ ನಡೆದ 100 ದಿನಗಳ ಕಾಲದ ರುವಾಂಡಾ ಹತ್ಯಾಕಾಂಡದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಟುಟ್ಸಿ ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಹುಟು ಬಹುಸಂಖ್ಯಾತ ಸೌಮ್ಯವಾದಿಗಳನ್ನು ಕಗ್ಗೊಲೆ ಮಾಡಲಾಗಿತ್ತು.

ಅಧ್ಯಕ್ಷ ಜುವೆನಿಲ್ ಹಬ್ಯಾರಿಮಾನಾ ಅವರನ್ನು ಒಯ್ಯುತ್ತಿದ್ದ ವಿಮಾನವನ್ನು ಹೊಡೆದು ಕೆಳಕ್ಕುರುಳಿಸಿದ ಬಳಿಕದ ಕೆಲವೇ ಗಂಟೆಗಳಲ್ಲಿ ರುವಾಂಡ ಹತ್ಯಾಕಾಂಡ ಆರಂಭವಾಯಿತು. ನ್ಯಾಯಮಂಡಳಿಯು ರುವಾಂಡಾ ಸೇನೆಯ ಮಾಜಿ ಕ್ಯಾಪ್ಟನ್ ವಿರುದ್ಧ ಹತ್ಯಾಕಾಂಡದ ಆರೋಪವನ್ನು ಹೇರಿತು.ನಿಜೆಯಿಮಾನಾ ಸೆರೆಗೆ ಸುಳಿವು ನೀಡಿದರೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ವಿದೇಶಾಂಗ ಇಲಾಖೆ ಅಡಿಯಲ್ಲಿ ಘೋಷಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ