ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್‌ಗೆ ಪಾಕ್ ಸುರಕ್ಷಿತ ಸ್ವರ್ಗವೆಂದ ಅಮೆರಿಕ (Washington | United States | Al-Qaeda | Osama)
 
ಅಲ್ ಖಾಯಿದಾ ನಾಯಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿದ್ದು, ಅಲ್ ಖಾಯಿದಾ ಭಯೋತ್ಪಾದಕ ಸಂಘಟನೆಯು ದೇಶವನ್ನು ಸುರಕ್ಷಿತ ಸ್ವರ್ಗದಂತೆ ಬಳಸಿಕೊಳ್ಳುತ್ತಿದೆಯೆಂದು ಅಮೆರಿಕ ನಂಬಿಕೊಂಡಿದೆ. 'ಒಸಾಮಾ ಪಾಕಿಸ್ತಾನದಲ್ಲಿ ಉಪಸ್ಥಿತನಿದ್ದಾನೆ. ತಾಲಿಬಾನ್ ಆದೇಶ ವ್ಯವಸ್ಥೆಯು ಕ್ವೆಟ್ಟಾದಲ್ಲಿ ನೆಲೆಹೊಂದಿದ್ದು, ನಗರದ ಉಪನಗರಗಳಿಂದ ಚಟುವಟಿಕೆ ನಡೆಸುತ್ತಿದೆಯೆಂದು' ಇಸ್ಲಾಮಾಬಾದ್ ಅಮೆರಿಕ ರಾಯಭಾರ ಕಚೇರಿಯ ಉಪಮುಖ್ಯಸ್ಥರು ತಿಳಿಸಿದ್ದಾರೆ.

ಆದರೆ ಅಲ್ ಖಾಯಿದಾ ನಾಯಕತ್ವ ತಮ್ಮ ದೇಶದಲ್ಲಿ ನೆಲೆ ಸ್ಥಾಪಿಸಿದೆಯೆಂಬ ವರದಿಗಳನ್ನು ವಾಷಿಂಗ್ಟನ್ನಿಗೆ ಭೇಟಿ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಅಲ್ಲಗಳೆದಿದ್ದಾರೆ.ಅಲ್ ಖಾಯಿದಾದ ಎರಡನೇ ಅಥವಾ ಮ‌ೂರನೇ ಹಂತದ ನಾಯಕರನ್ನು ಸೆರೆಹಿಡಿಯುವ ಅಥವಾ ನಿವಾರಿಸುವ ಮ‌‍ೂಲಕ ಅದಕ್ಕೆ ತೀವ್ರ ಪೆಟ್ಟು ನೀಡಿರುವುದಾಗಿ ಖುರೇಷಿ ಹೇಳಿದ್ದಾರೆ.

ಬಹು ಮಟ್ಟಿಗೆ ನಾವು ಅಲ್ ಖಾಯಿದಾ ಬೆನ್ನು ಮುರಿದ್ದಿದ್ದೇವೆ. ಸ್ವಾಟ್ ಕಾರ್ಯಾಚರಣೆ ಮತ್ತು ಮಲಖಾನ್ ಕಾರ್ಯಾಚರಣೆಯಿಂದ ಅದರ ಬೆನ್ನೆಲುಬು ಮುರಿದಿದೆಯೆಂದು ಖುರೇಷಿ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.'ಉಗ್ರಗಾಮಿಗಳು ಪಾಕಿಸ್ತಾನದಿಂದ ಓಡುತ್ತಿದ್ದಾರೆ. ಆದರೆ ಆಫ್ಘಾನಿಸ್ತಾನಕ್ಕೆ ಅವರು ಹಿಂತಿರುಗುತ್ತಿಲ್ಲ. ಅವರ ಬೇರೆ ಸ್ಥಳಗಳಿಗೆ ಶೋಧಿಸುತ್ತಿದ್ದು, ಬಹುಷಃ ಸೊಮಾಲಿಯಾಗೆ ತೆರಳಬಹುದು' ಎಂದು ಖುರೇಷಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ