ಭಾರತ ಪ್ರವಾಹ ಸ್ಥಿತಿ ಸ್ವತಃ ನಿಭಾಯಿಬಲ್ಲದು: ವಿಶ್ವಸಂಸ್ಥೆ
ವಿಶ್ವಸಂಸ್ಥೆ, ಬುಧವಾರ, 7 ಅಕ್ಟೋಬರ್ 2009( 14:48 IST )
ದಕ್ಷಿಣ ಭಾರತದ ಎರಡು ರಾಜ್ಯಗಳಲ್ಲಿ ಉಂಟಾದ ಭಾರೀ ಪ್ರವಾಹದಿಂದ ಉಂಟಾದ ಅಪಾರ ಸಾವು, ನೋವಿನಿಂದ ಪುನರ್ವಸತಿ ಮುಂತಾದ ವ್ಯವಸ್ಥೆ ನಿಭಾಯಿಸುವುದರಲ್ಲಿ ಭಾರತ ಸರ್ಕಾರಕ್ಕೆ ಸರ್ವರೀತಿಯಲ್ಲೂ ನೆರವು ನೀಡುವುದಾಗಿ ವಿಶ್ವಸಂಸ್ಥೆಯ ಉನ್ನತಾಧಿಕಾರಿಗಳು ಹೇಳಿದ್ದಾರೆ. ಪ್ರವಾಹವು ಅತ್ಯಂತ ಭೀಕರವಾಗಿದ್ದರೂ ಇಲ್ಲಿವರೆಗೆ ನೆರವಿಗಾಗಿ ಯಾಚಿಸಿಲ್ಲ.
ಅವರು ನೆರವಿಗಾಗಿ ಯಾಚಿಸಿದರೆ ನಾವು ನಮಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆಂದು ತುರ್ತು ಪರಿಹಾರ ವಿಭಾಗದ ವಿಶ್ವಸಂಸ್ಥೆ ಅಧಿಕಾರಿ ಜಾನ್ ಹೋಮ್ಸ್ ವರದಿಗಾರರಿಗೆ ತಿಳಿಸಿದರು.ನೆರವಿಗಾಗಿ ಕೇಳುವುದು ಅಥವಾ ಬಿಡುವುದು ಭಾರತದ ಸಾರ್ವಬೌಮ ಹಕ್ಕಾಗಿದೆ.
ಇಂತಹ ಬಿಕ್ಕಟ್ಟನ್ನು ಸ್ವತಃ ನಿಭಾಯಿಸುವುದಕ್ಕೆ ಭಾರತ ಶಕ್ತವಾಗಿದೆಯೆಂದು ಅವರು ಹೇಳಿದ್ದಾರೆ. ಭಾರತ ಸಾಮಾನ್ಯವಾಗಿ ಮಾನವೀಯ ಬಿಕ್ಕಟ್ಟಿನ ಸಮಸ್ಯೆಗಳನ್ನು ಆಂತರಿಕವಾಗಿ ನಿಭಾಯಿಸುತ್ತದೆಂದು ಹೇಳಿದ ಹೋಮ್ಸ್, ಚೀನಾದ ರೀತಿಯಲ್ಲಿ ಇಂತಹ ವಿಷಯಗಳನ್ನು ಭಾರತ ಸ್ವತಃ ನಿಭಾಯಿಸುತ್ತಿದೆಯೆಂದು ತಿಳಿಸಿದರು.