ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಕೀಮುಲ್ಲಾ ಹತ, ವಿಡಿಯೊ ತದ್ರೂಪಿಯೆಂದ ಮಲಿಕ್ (Islamabad | Taliban | Hakeemullah | Mehsud)
 
ತಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಮುಖ್ಯಸ್ಥ ಹಕೀಮುಲ್ಲಾ ಮೆಹ್ಸೂದ್ ಇತ್ತೀಚೆಗೆ ವಿಡಿಯೊದಲ್ಲಿ ಕಾಣಿಸಿಕೊಂಡು ಸತ್ತಿದ್ದಾನೆಂಬ ಊಹಾಪೋಹಗಳಿಗೆ ತೆರೆಎಳೆದಿರುವ ನಡುವೆ, ವಿಡಿಯೊದಲ್ಲಿ ತೋರಿಸಿದ ಚಿತ್ರ ಮೆಹ್ಸೂದ್‌ನ ತದ್ರೂಪವೆಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಹೇಳಿದ್ದು, ಹಕೀಮುಲ್ಲಾ ಮೆಹ್ಸೂದ್ ಸಾವಪ್ಪಿದ್ದಾನೆಂದು ಮಲಿಕ್ ತಿಳಿಸಿದ್ದಾರೆ.

ವಿಶ್ವಸಂಸ್ಥೆ ಕಟ್ಟಡದ ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಭೇಟಿ ಮಾಡಿ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ವಿಡಿಯೊದಲ್ಲಿರುವ ವ್ಯಕ್ತಿ ಮೆಹ್ಸೂದ್ ಸೋದರನಾಗಿರಬಹುದೆಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಆಹಾರ ಕಾರ್ಯಕ್ರಮದ ಕಟ್ಟಡದ ಮೇಲೆ ದಾಳಿಯ ಬಳಿಕ ಪೊಲೀಸ್ ಮತ್ತು ಭದ್ರತಾ ಕಾವಲುಗಾರರ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿಗಳನ್ನು ಕೂಡ ತಪಾಸಣೆ ಮಾಡುವಂತೆ ಭದ್ರತಾ ಅಧಿಕಾರಿಗಳಿಗೆ ಸೂಚಿಸಲಾಗಿದೆಯೆಂದು ಮಲಿಕ್ ಹೇಳಿದ್ದಾಗಿ ಡೇಲಿ ಟೈಮ್ಸ್ ವರದಿ ಮಾಡಿದೆ. ಪಾಕಿಸ್ತಾನದ ಸೇನೆಯ ಸೈನಿಕನ ಸಮವಸ್ತ್ರದಲ್ಲಿದ್ದ ದಾಳಿಕೋರನನ್ನು ಟಾಯ್ಲೆಟ್‌ ಬಳಸುವುದಕ್ಕಾಗಿ ಡಬ್ಲ್ಯುಎಫ್‌ಪಿ ಕಟ್ಟಡದ ಬಿಗಿ ಭದ್ರತಾ ವ್ಯವಸ್ಥೆಯೊಳಕ್ಕೆ ಅವಕಾಶ ನೀಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ