ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಅವರು ರಸಾಯನಶಾಸ್ತ್ರ ವಿಭಾಗದಲ್ಲಿ 2009ನೇ ಸಾಲಿನ ನೊಬೆಲ್ ಪ್ರಶಸ್ತಿ ಗಳಿಸುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅಮೆರಿಕದ ವಿಜ್ಞಾನಿಗಳಾದ ಥಾಮಸ್ ಎ. ಸ್ಟೈಟ್ಜ್ ಮತ್ತು ಇಸ್ರೇಲಿ ವಿಜ್ಞಾನಿ ಅಡಾ ಎ ಯೋನಾಥ್ ಜತೆ ಅವರು ವೆಂಕಟರಾಮನ್ ಜತೆ ಈ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಜೀವಪ್ರಕ್ರಿಯೆಗಳಲ್ಲಿ ಒಂದಾದ ರೈಬೊಸೋಮ್ ಕಾರ್ಯನಿರ್ವಹಣೆ ಮತ್ತು ರಚನೆ ಬಗ್ಗೆ ಅಧ್ಯಯನ ಮಾಡಿದ ತ್ರಿವಳಿ ವಿಜ್ಞಾನಿಗಳು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರೈಬೋಸೋಮ್‌ಗಳು ಪ್ರೋಟೀನ್ ಉತ್ಪಾದಿಸುತ್ತಿದ್ದು, ಪ್ರೋಟೀನ್‌ಗಳು ಎಲ್ಲ ಜೀವಿಗಳಲ್ಲಿ ರಾಸಾಯನಿಕ ಪ್ರಕ್ರಿಯೆ ನಿಯಂತ್ರಿಸುತ್ತದೆ. ರೈಬೋಸೋಮ್‌ಗಳು ಜೀವನಕ್ಕೆ ನಿರ್ಣಾಯಕವಾಗಿದ್ದು, ಹೊಸ ರೋಗನಿರೋಧಕಗಳಿಗೆ ಮುಖ್ಯ ಗುರಿಯಾಗಿವೆ. ಮೂವರು ವಿಜ್ಞಾನಿಗಳು ರೈಬೋಸೋಮ್ ತಯಾರಿಸುವ ನೂರಾರು ಸಾವಿರ ಅಣುಗಳ ಸ್ಥಾನಗಳನ್ನು ನಿರ್ಧರಿಸಲು ಎಕ್ಸರೆ ಕ್ರಿಸ್ಟಲೋಗ್ರಫಿ ವಿಧಾನವನ್ನು ಬಳಸಿದರು.
ವಿವಿಧ ರೋಗನಿರೋಧಕಗಳು ರೈಬೊಸೋಮ್‌ಗೆ ಹೇಗೆ ಕೂಡಿಕೊಳ್ಳುತ್ತದೆಂದು ತೋರಿಸಲು 3ಡಿ ಮಾದರಿಗಳನ್ನು ಅವರು ಸೃಷ್ಟಿಸಿದರು. ಹೊಸ ರೋಗನಿರೋಧಕಗಳ ಅಭಿವೃದ್ದಿಗೆ ಈ ಮಾದರಿಗಳನ್ನು ವಿಜ್ಞಾನಿಗಳು ಬಳಸುತ್ತಿದ್ದು, ಮಾನವ ಜೀವಿಗಳ ಪ್ರಾಣ ಉಳಿಸಲು ನೆರವಾಗುತ್ತಿದೆ. 1952ರಲ್ಲಿ ತಮಿಳುನಾಡಿದ ಚಿದಂಬರಂನಲ್ಲಿ ಜನಿಸಿರುವ ರಾಮಕೃಷ್ಣನ್, ಓಹಿಯೊ ವಿವಿಯಲ್ಲಿ ಬೌತಶಾಸ್ತ್ರದ ಪಿಎಚ್‌ಡಿ ಮುಗಿಸಿದ್ದಾರೆ.