ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಮನೆ, ಮಠ ಕಳೆದುಕೊಂಡ ಸಂತ್ರಸ್ತರ ನೆರವಿಗಾಗಿ ಅಮೆರಿಕವು 100,000 ಡಾಲರ್ ನೆರವನ್ನು ಪ್ರಕಟಿಸಿದೆ.
ಹೃದಯಕಲಕುವ ವೈಯಕ್ತಿಕ ನಷ್ಟ, ಮನೆಗಳು ಮತ್ತು ಆಸ್ತಿಪಾಸ್ತಿಗಳ ನಾಶ ಮತ್ತು ಜಾನುವಾರುಗಳು ಮತ್ತು ಬೆಳೆಗಳ ನಾಶ ವಿನಾಶಕಾರಿಯಾಗಿದೆಯೆಂದು ಭಾರತಕ್ಕೆ ಅಮೆರಿಕದ ರಾಯಭಾರಿ ತಿಮೋತಿ ಜೆ.ರೋಯಿಮರ್ ನೆರವನ್ನು ಪ್ರಕಟಿಸುತ್ತಾ ಹೇಳಿದ್ದಾರೆ.
ಭಾರೀ ಮಳೆ ಮತ್ತು ಪ್ರವಾಹಗಳಿಂದ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ಭಾಗಗಳು ಜಲಾವೃತವಾಗಿದ್ದು, ಲಕ್ಷಾಂತರ ಜನರು ನಿರ್ವಸಿತರಾಗಿದ್ದಾರೆ. ಕಳೆದ 7 ವರ್ಷಗಳಿಂದ ಅಮೆರಿಕವು ಭಾರತದ ವಿವಿಧ ಹಾನಿ ನಿರ್ವಹಣೆ ಚಟುವಟಿಕೆಗಳಿಗೆ 16 ದಶಲಕ್ಷ ಡಾಲರ್ ನೆರವು ನೀಡಿದೆ.