ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ಮನಿ ಲೇಖಕಿ ಮ್ಯುಲ್ಲರ್‌ಗೆ ನೊಬೆಲ್ ಪ್ರಶಸ್ತಿಯ ಗರಿ (Mueller | Stockholm | Nobel | Literature)
Feedback Print Bookmark and Share
 
ಸಾಹಿತ್ಯ ವಿಭಾಗದಲ್ಲಿ ಜರ್ಮನಿಯ ಲೇಖಕಿ ಹರ್ಟಾ ಮ್ಯುಲ್ಲರ್ ಅವರು 2009ನೇ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆಂದು ಸ್ಟಾಕ್‌ಹಾಂ ಅಕಾಡೆಮಿ ಪ್ರಕಟಿಸಿದೆ. ರೊಮಾನಿಯದಲ್ಲಿ 1953ರಲ್ಲಿ ಹುಟ್ಟಿದ ಮುಲ್ಲರ್ ಅವರು ನಿಕೋಲೆ ಸಿಯಾಸೆಸ್ಕು ಆಡಳಿತದಡಿಯ ಕಠಿಣ ಪರಿಸ್ಥಿತಿಗಳನ್ನು ಕುರಿತು ಬಿಂಬಿಸಿದ್ದಕ್ಕಾಗಿ ಹೆಸರಾಗಿದ್ದರು. ಮುಲ್ಲರ್ ಅವರ ಕವಿತೆ ಮತ್ತು ಗದ್ಯ ಎರಡನ್ನೂ ಸ್ವೀಡಿಷ್ ಅಕಾಡೆಮಿ ಶ್ಲಾಘಿಸಿದೆ.

ರೊಮಾನಿಯ ಜರ್ಮನ್ ಅಲ್ಪಸಂಖ್ಯಾತ ಕುಟುಂಬದಲ್ಲಿ ಮ್ಯುಲ್ಲರ್ ಜನಿಸಿದ್ದರು.ಅವರ ತಾಯಿಯನ್ನು ಎರಡನೇ ವಿಶ್ವಮಹಾಯುದ್ಧದ ಬಳಿಕ ಸೋವಿಯಟ್ ಒಕ್ಕೂಟದ ಕಾರ್ಮಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. 1970ರಲ್ಲಿ ರೊಮಾನಿಯ ಆಡಳಿತದ ಗುಪ್ತ ಪೊಲೀಸ್ ಜತೆ ಸಹಕರಿಸಲು ನಿರಾಕರಿಸಿದ್ದಕ್ಕಾಗಿ ಮ್ಯುಲ್ಲರ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬಳಿಕ 1987ರಲ್ಲಿ ಜರ್ಮನಿಗೆ ವಲಸೆ ಹೋದ ಅವರು ಜರ್ಮನ್ ಭಾಷೆಯಲ್ಲಿ ಸಣ್ಣ ಕಥೆಗಳನ್ನು ಬರೆದಿದ್ದು, ರೊಮಾನಿಯದಲ್ಲಿ ಆ ಲೇಖನಕ್ಕೆ ನಿಷೇಧ ವಿಧಿಸಲಾಗಿತ್ತು.

ಮ್ಯುಲರ್ ಆರಂಭದ ಕೃತಿಗಳನ್ನು ದೇಶದ ಹೊರಗೆ ಕಳ್ಳಸಾಗಣೆ ಮಾಡಲಾಯಿತು. ನಂತರದ ವರ್ಷಗಳಲ್ಲಿ ಅವರು ಅನೇಕ ಸಾಹಿತ್ಯ ಪ್ರಶಸ್ತಿಗಳನ್ನು ಗಳಿಸಿದ್ದು ಐರ್ಲೆಂಡ್ ಇಂಪಾಕ್ ಪ್ರಶಸ್ತಿ ಕೂಡ ಸೇರಿದೆ.

ಬಳಿಕ ಅವರು 2001ರಲ್ಲಿ ಬರೆದ ದಿ ಅಪಾಯಿಂಟ್‌‌ಮೆಂಟ್ ಪುಸ್ತಕ ಸರ್ವಾಧಿಕಾರದ ಅಡಿಯಲ್ಲಿ ಜನಜೀವನದ ಬಗ್ಗೆ ಮಹತ್ತರ ವಿವರಗಳನ್ನು ಹೊರಚೆಲ್ಲಿದೆ. ಲೇಖಕಿ 10 ದಶಲಕ್ಷ ಸ್ವೀಡಿಷ್ ಕ್ರೋನರ್(892,000 ಡಾಲರ್) ನಗದು ಪ್ರಶಸ್ತಿಯೊಂದಿಗೆ ನೊಬೆಲ್ ಗೌರವವನ್ನು ಗೆದ್ದಿದ್ದು, ಈ ವರ್ಷಾಂತ್ಯದಲ್ಲಿ ಸ್ಟಾಕ್‌ಹಾಂನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು.
ಸಂಬಂಧಿತ ಮಾಹಿತಿ ಹುಡುಕಿ