ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎನ್‌ಆರ್‌ಐ ದಂಪತಿಗೆ 160,000 ಪೌಂಡ್ ಪರಿಹಾರ (NRI | British wife | Cardiff | Rees)
Feedback Print Bookmark and Share
 
ಕಾರ್ಡಿಫ್ ಆಸ್ಪತ್ರೆಯಲ್ಲಿ ನ.2005ರಲ್ಲಿ ಭಾರತೀಯ ಮ‌ೂಲದ ವ್ಯಕ್ತಿ ಮತ್ತು ಅವರ ಬ್ರಿಟನ್ ಪತ್ನಿಗೆ ಸೇರಿದ್ದೆಂದು ಹೇಳಲಾದ ಮಗುವೊಂದು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಹೊರಗಿನ ಇತ್ಯರ್ಥದ ರೂಪದಲ್ಲಿ 160,000 ಪೌಂಡ್ ಪರಿಹಾರ ನೀಡಲಾಗಿದೆ.

ತಮ್ಮಪುತ್ರ ಅರುಣ್ ಎಂಬವನು ಆಸ್ಪತ್ರೆಯು ಮೇಲಿಂದ ಮೇಲೆ ಪ್ರಮಾದಗಳನ್ನು ನಡೆಸಿದ ಪರಿಣಾಮವಾಗಿ ಸತ್ತನೆಂದು ಗೋವಾ ಮ‌ೂಲದ ಕೃಷ್ಣ ಗೋವೆಕರ್ ಮತ್ತು ಪತ್ನಿ ಜೋಹಾನ್ ರೀಸ್ ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಸುಮಾರು 3 ವರ್ಷಗಳ ಕಾನೂನಿನ ಹೋರಾಟದ ಬಳಿಕ ಆಸ್ಪತ್ರೆಯು ಕೋರ್ಟ್ ಹೊರಗಿನ ಪರಿಹಾರ ನೀಡಲು ಒಪ್ಪಿಕೊಂಡಿದೆ.

ಹಿಂದಿನ ಗರ್ಭಪಾತಗಳಿಂದ ತೀವ್ರ ನೊಂದಿದ್ದ ತಾವು ಪುನಃ ಗರ್ಭವತಿಯಾದಾಗ ರೋಮಾಂಚನಗೊಂಡಿದ್ದೆ. ಆದರೆ ಅರುಣ್ ಸಾವು ತಮ್ಮನ್ನು ನಾಶ ಮಾಡಿದ್ದು, ಆ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲವೆಂದು ಬ್ರಿಟನ್ ಪತ್ನಿ ರೀಸ್ ತಿಳಿಸಿದ್ದಾರೆ. ದಂಪತಿಯ ವಕೀಲ ಗೈ ಫಾಸ್ಟರ್ ಈ ಕುರಿತು ತಿಳಿಸುತ್ತಾ, ಜೋಹಾನ್ ಮತ್ತು ಕೃಷ್ಣ ಅವರಿಗೆ ಈ ದಾವೆ ಪರಿಹಾರ ಪಡೆಯುವ ಸಲುವಾಗಿ ಇರಲಿಲ್ಲ. ಬೇರೆ ದಂಪತಿ ತಾವು ಅನುಭವಿಸಿದ ಕಷ್ಟ ಅನುಭವಿಸದಿರಲು ಆಸ್ಪತ್ರೆಗೆ ಪಾಠ ಕಲಿಸುವುದಾಗಿತ್ತು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ