ವಿಶ್ವಸಂಸ್ಥೆ, ಶುಕ್ರವಾರ, 16 ಅಕ್ಟೋಬರ್ 2009( 17:49 IST )
ಹಸಿವನ್ನು ತಡೆಯಲು ಬ್ರೆಜಿಲ್ ಮತ್ತು ಚೀನಾ ಕೈಗೊಂಡ ಪ್ರಯತ್ನಗಳಿಗೆ ಶ್ಲಾಘಿಸಿರುವ ಅಭಿವೃದ್ಧಿ ದತ್ತಿಸಂಸ್ಥೆಯ ವರದಿಯನ್ನು ವಿಶ್ವಸಂಸ್ಥೆ ಆಹಾರದಿನಾಚರಣೆಗೆ ಹೊಂದಿಕೆಯಾಗುವಂತೆ ಬಿಡುಗಡೆ ಮಾಡಲಾಗಿದೆ. ಆದರೆ ಬಡತನ, ಹಸಿವು ನಿವಾರಣೆಗೆ ಭಾರತ ಮತ್ತಿತರ ರಾಷ್ಟ್ರಗಳು ಸಾಕಷ್ಟು ಕೆಲಸ ಮಾಡುತ್ತಿಲ್ಲವೆಂದು ಆಕ್ಷನ್ ಏಡ್ ವರದಿಯಲ್ಲಿ ಟೀಕಿಸಲಾಗಿದೆ.
ಶ್ರೀಮಂತ ರಾಷ್ಟಗಳಿಗೆ ಕೂಡ ಹಸಿವು ನಿವಾರಣೆಯಲ್ಲಿ ದರ್ಜೆ ನೀಡಿರುವ ಏಜನ್ಸಿ, ಲಕ್ಸೆಂಬರ್ಗ್ ಜಾಗತಿಕ ಹಸಿವನ್ನು ನಿವಾರಿಸಲು ತೀವ್ರ ಯತ್ನಿಸುತ್ತಿದ್ದು, ಅಮೆರಿಕ ಮತ್ತು ನ್ಯೂಜಿಲೆಂಡ್ ದರ್ಜೆಯಲ್ಲಿ ಕೆಳಕ್ಕೆ ಕುಸಿದಿದೆ. ಒಂದು ಶತಕೋಟಿ ಜನರು ಜಾಗತಿಕವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆಂದು ವಿಶ್ವಸಂಸ್ಥೆಯ ಅಧ್ಯಯನ ತಿಳಿಸಿದೆ. ಆಕ್ಷನ್ ಏಡ್ಸ್‌ನ ಹಂಗರ್ ಫ್ರೀ ವರದಿಯಲ್ಲಿ ಹಸಿವು ನಾವು ಆಯ್ಕೆ ಮಾಡಿಕೊಳ್ಳುತ್ತೇವೆಯೇ ಹೊರತು ನಿಸರ್ಗದ ಬಲಾತ್ಕಾರವಲ್ಲ ಎಂದು ಬಣ್ಣಿಸಿದೆ.
ಅಸಮಾನತೆಯಿಂದ ಹಸಿವು ಆರಂಭವಾಗುತ್ತದೆ. ಆಹಾರವನ್ನು ಒಂದು ಹಕ್ಕಾಗಿ ತಿಳಿಯದೇ ವಸ್ತುವಾಗಿ ಪರಿಗಣಿಸುವ ವಿಕೃತ ನೀತಿಗಳಿಂದ ಹಸಿವು ಬೆಳೆಯುತ್ತದೆ ಎಂದು ಅದು ಹೇಳಿದೆ. ಈ ನೀತಿಗಳ ಕಾರಣದಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವತಃ ಹಸಿವನ್ನು ನೀಗಿಸುವಷ್ಟು ಆಹಾರವನ್ನು ಬೆಳೆಯುತ್ತಿಲ್ಲ. ಅಭಿವೃದ್ಧಿಶೀಲರಾಷ್ಟ್ರಗಳು ಆಹಾರವನ್ನು ಒಂದು ಸಾಮಗ್ರಿಯಾಗಿ ಪರಗಣಿಸಿದ್ದು, ಆಹಾರವು ಜನತೆಯ ಹಕ್ಕೆಂದು ಭಾವಿಸಿಲ್ಲವೆಂದು ಅದು ನುಡಿದಿದೆ.