ಆಸ್ಟ್ರೇಲಿಯಾದ 16 ವರ್ಷದ ಶಾಲಾ ಬಾಲಕಿಯೊಬ್ಬಳು ಯಾರ ನೆರವು ಇಲ್ಲದೆ ಹಾಯಿದೋಣಿ ಮೂಲಕ ವಿಶ್ವ ಪರ್ಯಟನೆ ಆರಂಭಿಸಿ ಇತಿಹಾಸ ನಿರ್ಮಿಸಲು ಹೊರಟ್ಟಿದ್ದಾಳೆ. ಈ ವಿಶ್ವ ಪರ್ಯಟನೆಗೆ ಮುಂದಾಗಿರುವ ಬಾಲಕಿಯ ಹೆಸರು ಜೆಸಿಯಾ ವ್ಯಾಟ್ಸನ್. ಈಕೆ ಜಲಮಾರ್ಗದ ಮೂಲಕ ವಿಶ್ವದ ಎಲ್ಲೆಡೆ 38 ಸಾವಿರ ಕಿ.ಮೀ ಪ್ರಯಾಣಕ್ಕೆ ಸಿದ್ಧವಾಗಿದ್ದಾಳೆ. ಪ್ರಯಾಣದ ಸಂದರ್ಭದಲ್ಲಿ ಎದುರಾಗಲಿರುವ ಗಂಡಾಂತರ ಎದುರಿಸಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿದುಕೊಂಡಿದ್ದಾಳೆ ಎಂದು ಕುಟುಂಬ ತಿಳಿಸಿದೆ.