ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫಾಹಿಮ್ ಅನ್ಸಾರಿ ವಿರುದ್ಧ ಪಾಕ್ ಕೋರ್ಟ್ ವಾರಂಟ್ (Pak court | 26 11 | Faheem Ansari | Mumbai Terror Attack)
Feedback Print Bookmark and Share
 
ಮುಂಬೈ ದಾಳಿಯಲ್ಲಿ ಆರೋಪಿಗಳಲ್ಲೊಬ್ಬನಾಗಿರುವ ಭಾರತೀಯ ಫಾಹಿಮ್ ಅನ್ಸಾರಿ ಎಂಬಾತನ ಮೇಲೆ ಪಾಕಿಸ್ತಾನ ನ್ಯಾಯಾಲಯವೊಂದು ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದೆ. ಆದರೆ ಇದು ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿ ಅಲ್ಲ. ಬದಲಾಗಿ, ಆರೋಪಿಯು ನಕಲಿ ದಾಖಲೆ ತೋರಿಸಿ ಪಾಕಿಸ್ತಾನೀ ಪಾಸ್‌ಪೋರ್ಟ್ ಪಡೆದಿದ್ದಾನೆ ಎಂಬ ಕಾರಣಕ್ಕೆ!

ಭಾರತೀಯ ನಾಗರಿಕನಾಗಿರುವ ಫಾಹಿಮ್ ನಕಲಿ ದಾಖಲೆ ನೀಡಿ ಪಾಕಿಸ್ತಾನಿ ಪಾಸ್‌ಪೋರ್ಟ್ ಪಡೆದಿದ್ದ. ಈ ಕಾರಣಕ್ಕೆ ಪಾಕಿಸ್ತಾನದಲ್ಲಿ ಆತ ಅಪರಾಧ ಎಸಗಿದ್ದಾನೆ ಎಂಬ ಬಗ್ಗೆ ಅಲ್ಲಿನ ನ್ಯಾಯಲಯವೊಂದು ವಾರಂಟ್ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ, ಮುಂಬೈ ದಾಳಿಯ ಕುರಿತು ವಾದ ಮಂಡಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಈ ಬೆಳವಣಿಗೆಳನ್ನು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದ್ದಾರೆ.

ವಾರಂಟ್ ಹೊರಡಿಸಲಾಗಿದ್ದರೂ, ಅದಿನ್ನೂ ಭಾರತಕ್ಕೆ ತಲುಪಿಲ್ಲ. ಅದು ಇಂಟರ್‌ಪೋಲ್ ಮೂಲಕ ಬರಬೇಕಾಗಿರುವುದರಿಂದ ಇದಕ್ಕೆ ಸ್ವಲ್ಪ ಸಮಯ ತಗುಲಬಹುದು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ