ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಜ್‌ಮಹಲ್ ತದ್ರೂಪ :ಎನ್‌ಆರ್‌ಐಗಳ ಯೋಜನೆ (NRI | Replica | New Zealand | Taj Mahal)
Feedback Print Bookmark and Share
 
ಇಲ್ಲಿನ ನ್ಯೂಜಿಲೆಂಡ್ ನಗರದಲ್ಲಿ ತಾಜ್‌ಮಹಲ್ ಪ್ರತಿರೂಪವನ್ನು ನಿರ್ಮಿಸಲು ಭಾರತೀಯರ ಸಮ‌ೂಹವೊಂದು 20 ದಶಲಕ್ಷ ಡಾಲರ್ ಯೋಜನೆಯೊಂದನ್ನು ರೂಪಿಸಿದೆ. ಪ್ರೇಮದ ಸಂಕೇತವಾದ ಈ ತಾಜ್‌ಮಹಲ್ ತದ್ರೂಪವನ್ನು ಆಕ್ಲೆಂಡ್ ಉಪನಗರ ಎಡೆನ್ ಟೆನ ನ್ಯೂ ನಾರ್ಥ್ ರಸ್ತೆಯ ಮಹಾತ್ಮ ಗಾಂಧಿ ಕೇಂದ್ರದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.

ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು, ವೈಭವವನ್ನು ಬಿಂಬಿಸುವ ಕಟ್ಟಡವನ್ನು ನಿರ್ಮಿಸಲು ನಾವು ಬಯಸಿದ್ದು, ಇದು ಭಾರತೀಯ ಸಮುದಾಯಕ್ಕೆ ಹೆಮ್ಮೆಯೆನಿಸುತ್ತದೆ ಎಂದು ಕೇಂದ್ರದ ಅಧ್ಯಕ್ಷ ಕಾನು ಪಟೇಲ್ ಹೇಳಿಕೆ ಉಲ್ಲೇಖಿಸಿ ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ. ಪ್ರತಿಕೃತಿಯು ಅಮೃತಶಿಲೆಯ ಭವ್ಯ ಸ್ಥೂಪ, ನೀರಿನ ಕೊಳ ಮತ್ತು ಚಿನ್ನದ ಹೊದಿಕೆಯ ಆಭರಣಗಳನ್ನು ಹೊಂದಲಿವೆ.

ಮಹಾತ್ಮ ಗಾಂಧಿ ಕೇಂದ್ರವನ್ನು ಫಿಂಡ್ಲೇಸ್ ಬೇಕರಿಯಿದ್ದ ಪ್ರದೇಶದಲ್ಲಿ 6 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಆಕ್ಲೆಂಡ್ ಭಾರತೀಯರ ಒಕ್ಕೂಟವು 1.9 ದಶಲಕ್ಷ ಡಾಲರ್‌ ವೆಚ್ಚಕ್ಕೆ ಜಾಗವನ್ನು ಖರೀದಿಸಿತ್ತು. ಭಾರತೀಯ ಸಮುದಾಯಕ್ಕಲ್ಲದೇ ಪ್ರವಾಸಿ ಆಕರ್ಷಣೆಯಾಗಿ ಆಕ್ಲೆಂಡ್ ನಗರಕ್ಕೆ ಕೂಡ ಹೊಸ ಕಟ್ಟಡ ಅನುಕೂಲವಾಗಲಿದೆಯೆಂದು ಪಟೇಲ್ ಹೇಳಿದ್ದಾರೆ.

ಕೇಂದ್ರವು ಸಮುದಾಯದ ಕೆಲವು ಗಮನಾರ್ಹ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಮತ್ತು ಹಬ್ಬಗಳನ್ನು ಇಲ್ಲಿ ಆಯೋಜಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ