ವಾಷಿಂಗ್ಟನ್, ಮಂಗಳವಾರ, 20 ಅಕ್ಟೋಬರ್ 2009( 13:36 IST )
ತಮ್ಮ ಸಂಘಟನೆಯು ಭಾರತದ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿಯೆಂದು ಪಾಕಿಸ್ತಾನದ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ಇತ್ತೀಚಿನ ಬಡಾಯಿಯು ಇಸ್ಲಾಮಾಬಾದ್ ಆಡಳಿತವನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವೆಂದು ದಕ್ಷಿಣ ಏಷ್ಯಾ ಕುರಿತ ಪ್ರಮುಖ ಅಮೆರಿಕನ್ ತಜ್ಞೆ ಸೋಮವಾರ ತಿಳಿಸಿದ್ದಾರೆ.
ಪಾಕಿಸ್ತಾನದ ಗಡಿಯನ್ನು ರಕ್ಷಿಸಿ ಭಾರತದ ವಿರುದ್ಧ ಹೋರಾಟಕ್ಕೆ ಸಿದ್ಧವಿರುವುದಾಗಿ ಉಗ್ರಗಾಮಿ ಗುಂಪುಗಳು ಘೋಷಿಸುವ ಮೂಲಕ ಪಾಕಿಸ್ತಾನದ ಸಾರ್ವಜನಿಕರ ತಾಲಿಬಾನ್ ಗೊಂದಲಗೊಳಿಸುವ ಪ್ರಯತ್ನ ಮಾಡಿದೆಯಂದು ಹೆರಿಟೇಜ್ ಪ್ರತಿಷ್ಠಾನದ ಲೀಸಾ ಕರ್ಟಿಸ್ ಹೇಳಿದ್ದಾರೆ.
ಪಾಕಿಸ್ತಾನದ ಸಾರ್ವಜನಿಕರು ಇಂತಹ ಪ್ರಚಾರಕ್ಕೆ ಬಲಿಯಾಗುವುದಿಲ್ಲವೆಂದು ಆಶಿಸುವುದಾಗಿ ಅವರು ತಿಳಿಸಿದ್ದು, ವಾಸ್ತವವಾಗಿ ಸರ್ಕಾರೇತರ ಪಾತ್ರಧಾರಿಗಳಾದ ಈ ಉಗ್ರಗಾಮಿಗಳು ಪಾಕಿಸ್ತಾನ ರಾಷ್ಟ್ರದ ಮೇಲೆ ತಮ್ಮ ಬಂದೂಕನ್ನು ಗುರಿಯಿರಿಸಿದ್ದಾರೆಂದು ಅವರು ಸ್ಪಷ್ಟಪಡಿಸಿದರು.
ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಪಾಕಿಸ್ತಾನ ಸಮಾಜದಿಂದ ಮೂಲೋತ್ಪಾಟನೆ ಮಾಡಲು ದೀರ್ಘಾವಧಿಯ ಪ್ರಯತ್ನ ಮಾಡಬೇಕಾಗುತ್ತದೆಂದು ಹೇಳಿದ ಕರ್ಟಿಸ್, ವಜಿರಿಸ್ತಾನದಲ್ಲಿ ಯಶಸ್ವಿ ಕಾರ್ಯಾಚರಣೆಯಿಂದ ದೇಶವನ್ನು ಸೂಕ್ತ ಮಾರ್ಗದಲ್ಲಿ ಒಯ್ಯುತ್ತದೆಂದು ಅವರು ವಾದಿಸಿದ್ದಾರೆ.