ಮೆಲ್ಬೋರ್ನ್, ಮಂಗಳವಾರ, 20 ಅಕ್ಟೋಬರ್ 2009( 16:24 IST )
ಶಾಲೆಯ ಹಿರಿಯ ದರ್ಜೆಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಆಲಂಗಿಸುವ ಅಥವಾ ಬೇರಾವುದೇ ರೀತಿಯ ವಾತ್ಸಲ್ಯ ತೋರಿಸುವುದಕ್ಕೆ ಆಸ್ಟ್ರೇಲಿಯದ ಪ್ರಾಥಮಿಕ ಶಾಲೆಯೊಂದು ನಿಷೇಧ ವಿಧಿಸಿದ್ದು, ಕಿರಿಯ ವಿದ್ಯಾರ್ಥಿಗಳಿಗೆ ಕೆಟ್ಟ ಆದರ್ಶವನ್ನು ಹಾಕಿಕೊಟ್ಟಂತಾಗಿ ಅವರ ಮೇಲೆ ದುಷ್ಪರಿಣಾಮ ಉಂಟಾಗುತ್ತದೆಂದು ಹೇಳಿದೆ.
ಲಾರ್ಜ್ ಬೇ ಪ್ರಾಥಮಿಕ ಶಾಲೆಯ 6 ಮತ್ತು 7ರ ಪ್ರಾಯದ ನಡುವಿನ ವಿದ್ಯಾರ್ಥಿಗಳಿಗೆ ಈ ರೀತಿಯ ಆದೇಶ ನೀಡಲಾಗಿದೆಯೆಂದು ಹೆರಾಲ್ಡ್ ಸನ್ ವರದಿ ಮಾಡಿದೆ. ಈ ಕ್ರಮದಿಂದ ತೀವ್ರ ನೊಂದಿರುವ ವಿದ್ಯಾರ್ಥಿಗಳ ಪೋಷಕರು, ವಾತ್ಸಲ್ಯ ತೋರಿಸುವ ರೀತಿಯಲ್ಲಿ ಅಸಹಜವೆಂದು ಕಂಡುಬಂದರೆ ಮಾತ್ರ ಶಾಲೆ ಕ್ರಮ ಕೈಗೊಳ್ಳಬೇಕೇ ಹೊರತು ಎಲ್ಲ ವಿದ್ಯಾರ್ಥಿಗಳಿಗೆ ಏಕರೂಪದ ನಿಷೇಧ ಹೇರದಂತೆ ಅವರು ತಿಳಿಸಿದ್ದಾರೆ.ರಜಾದಿನಗಳ ಕಳೆದಬಳಿಕ ವಾತ್ಸಲ್ಯದ ಅಪ್ಪುಗೆಗಳು ಹೆಚ್ಚಿದ್ದರಿಂದ ಶಾಲೆಯ ಡೆಪ್ಯೂಟಿ ಪ್ರಿನ್ಸಿಪಾಲ್ ಮತ್ತು ಕೌನ್ಸಲರ್‌ಗಳು ಈ ಕುರಿತು ವಿದ್ಯಾರ್ಥಿಗಳಿಗೆ ಆದೇಶ ನೀಡಿದ್ದರು.
ವಾತ್ಸಲ್ಯದ ಸಂಕೇತಿಸುವ ಅಪ್ಪುಗೆಯು ಶಿಕ್ಷೆಗೆ ಪರಿವರ್ತನೆಯಾಗುವ ಶಾಲೆಗೆ ತನ್ನ ಮಗುವನ್ನು ಕಳಿಸಲು ತಾವು ಇಷ್ಟಪಡುವುದಿಲ್ಲವೆಂದು ತಾಯಿಯೊಬ್ಬರು ಶಾಲಾಮಂಡಳಿಯ ಆದೇಶದ ವಿರುದ್ಧ ಕಿಡಿಕಾರಿದ್ದಾರೆ.ಪೋಷಕರಿಂದ ಈ ಕುರಿತು ದೂರುಗಳು ಬಂದ ಬಳಿಕ ಸ್ನೇಹಿತರನ್ನು ಅಥವಾ ಸ್ನೇಹಿತೆಯರನ್ನು ಹಿರಿಯ ವರ್ಗದ ವಿದ್ಯಾರ್ಥಿಗಳು ಆಲಂಗಿಸಿಕೊಂಡು ತೋರಿಸುವ ವಾತ್ಸಲ್ಯ ಮತ್ತಿತರ ಸಂಕೇತಗಳಿಗೆ ನಿಷೇಧವನ್ನು ಸಮರ್ಥಿಸಿಕೊಂಡು ಶಾಲೆ ಹೇಳಿಕೆಯೊಂದನ್ನು ನೀಡಿದೆ.
ಸ್ನೇಹಿತರ ನಡುವೆ ಲಾರ್ಜ್ಸ್ ಬೇ ಶಾಲೆಯಲ್ಲಿ ಆಲಿಂಗನವನ್ನು ನಿಷೇಧಿಸಿಲ್ಲ. ಆದರೆ ಆರೇಳು ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಗೆಳೆಯ ಅಥವಾ ಗೆಳತಿಯೊಂದಿಗೆ ಶಾಲೆಯ ಆವರಣದಲ್ಲಿ ಆಲಿಂಗಿಸಿಕೊಳ್ಳುವ ಮೂಲಕ ತೋರಿಸುವ ಪ್ರೀತಿಗೆ ನಮ್ಮ ವಿರೋಧವಿದೆಯೆಂದು ಹೇಳಿದ್ದಾರೆ. ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಒಳ್ಳೆಯ ಆದರ್ಶವನ್ನು ಹಾಕಿಕೊಡಬೇಕೆಂದು ಅವರು ಹೇಳಿದ್ದಾರೆ.