ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರ ಸೇರ್ಪಡೆಗೆ ಒಪ್ಪದ ವಾಜಪೇಯಿ, ಮುಷರಫ್ ಮುನಿಸು (Agra summit | Musharraf | New York | Vajpayee)
Feedback Print Bookmark and Share
 
ವಿಫಲಗೊಂಡ 2001ರ ಆಗ್ರಾ ಶೃಂಗಸಭೆಯಿಂದ ತಾವು ಹೊರಹೋಗಲು ಬಯಸಿದ್ದಾಗಿಯ‌ೂ ಆದರೆ ಹಿರಿಯ ಅಧಿಕಾರಿಯೊಬ್ಬರು ಹಾಗೆ ಮಾಡದಂತೆ ತಮ್ಮನ್ನು ತಡೆದರು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ತಿಳಿಸಿದ್ದಾರೆ.

ಶೃಂಗಸಭೆಯ ಬಳಿಕ ಹೊರಡಿಸಿದ ಜಂಟಿ ಘೋಷಣೆಯಲ್ಲಿ ಕಾಶ್ಮೀರ ವಿವಾದದ ಉಲ್ಲೇಖವನ್ನು ಸೇರ್ಪಡೆ ಮಾಡಲು ಆಗಿನ ಭಾರತದ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ಬಾರಿ ನಿರಾಕರಿಸಿದ್ದರಿಂದ ತಾವು ತೀವ್ರ ಹತಾಶರಾಗಿದ್ದಾಗಿ ಅವರು ನ್ಯೂಯಾರ್ಕ್‌ನಲ್ಲಿ ವರದಿಗಾರರಿಗೆ ತಿಳಿಸಿದರು.

ಮುಷರಫ್ ಅವರ ಪ್ರಕಾರ, ಜಂಟಿ ಘೋಷಣೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿವಾದವನ್ನು ಸೇರಿಸಲು ಮತ್ತು ರಾಜಕೀಯ ಮಾತುಕತೆ ಮ‌ೂಲಕ ಇತ್ಯರ್ಥಕ್ಕೆ ನಿರ್ಧರಿಸಲಾಗಿತ್ತು. ಆದರೆ ಭಾರತದ ಮಾಜಿ ಪ್ರಧಾನಮಂತ್ರಿ ಕೊನೆಯ ಕ್ಷಣದಲ್ಲಿ ತಮ್ಮ ಮಾತಿನಿಂದ ಹಿಂದೆ ಸರಿದರು ಎಂದು ಮುಷರಫ್ ಹೇಳಿದ್ದಾರೆ. ಕೆಲವು ಬದಲಾವಣೆಯೊಂದಿಗೆ ಎರಡನೇ ಕರಡನ್ನು ಸಿದ್ಧಪಡಿಸಲಾಯಿತಾದರೂ ಅದರಿಂದ ಕೂಡ ವಾಜಪೇಯಿ ಹಿಂದೆ ಸರಿದರು ಎಂದು ಮುಷರಫ್ ಹೇಳಿದ್ದಾರೆ.

ತಾವು ಆ ಕೂಡಲೇ ಅಲ್ಲಿಂದ ನಿರ್ಗಮಿಸಲು ಪ್ರಯತ್ನಿಸಿದರೂ, ವಿದೇಶಾಂಗ ಕಾರ್ಯದರ್ಶಿಯ ಸಲಹೆ ಮೇಲೆ ಹಾಗೇ ಮಾಡಲಿಲ್ಲವೆಂದು ಮುಷರಫ್ ಹೇಳಿದ್ದಾರೆ. ತಾವು ಮಾಧ್ಯಮದ ಜತೆ ಮಾತನಾಡಲು ಬಯಸಿದ್ದರೂ, ತಾವಿದ್ದ ಹೊಟೆಲ್ ಸ್ಥಳಕ್ಕೆ ಮಾಧ್ಯಮಕ್ಕೆ ಭದ್ರತಾ ಕಾರಣಗಳಿಗಾಗಿ ಅವಕಾಶ ನೀಡಿರಲಿಲ್ಲವೆಂದು ಮಾಜಿ ಮಿಲಿಟರಿ ಸರ್ವಾಧಿಕಾರಿ ಹೇಳಿದ್ದಾರೆ. ಬೆಲೂಚಿ ನಾಯಕ ಅಕ್ಬರ್ ಖಾನ್ ಬುಗ್ಟಿ ಹತ್ಯೆಗೆ ಸಂಬಂಧಪಟ್ಟಂತೆ, ತಾವು ಆಗ ರಾಷ್ಟ್ರದ ಮುಖ್ಯಸ್ಥನಾಗಿದ್ದೇನೆಯೇ ಹೊರತು ಸರ್ಕಾರವನ್ನು ನಡೆಸುತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ