ಮಕ್ಕಳ ಬಗ್ಗೆ ಲೈಂಗಿಕ ಆಕರ್ಷಿತರಾಗುವ ಮಿಲಿಯಾಧಿಪತಿಗಳ ಲೈಂಗಿಕ ಸುಖಕ್ಕಾಗಿ ತಮ್ಮ ಅಪ್ರಾಪ್ತ ವಯಸ್ಕ 12ರ ಪ್ರಾಯವನ್ನೂ ದಾಟಿರದ ಹೆಣ್ಣುಮಕ್ಕಳನ್ನು ಪ್ರತಿ ಬಾರಿಗೆ 50,000 ಡಾಲರ್ಗೆ ಪೋಷಕರು ಮಾರುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ.
ಪಶ್ಚಿಮ ಲಂಡನ್ನಲ್ಲಿರುವ ಪಂಚತಾರಾ ಹೊಟೆಲ್ವೊಂದರಲ್ಲಿ 14ರಿಂದ 23ರ ಪ್ರಾಯದ 6 ಮಂದಿ ಯುವತಿಯರ ಮಾರಾಟಕ್ಕೆ ಯತ್ನಿಸಿದ ಮೂವರು ಮಹಿಳೆಯರು ಮತ್ತು ಪುರುಷನೊಬ್ಬ ಸೇರಿದ ಗ್ಯಾಂಗನ್ನು ಪೊಲೀಸರು ಬಂಧಿಸಿದ ಬಳಿಕ ಇದು ಬೆಳಕಿಗೆ ಬಂದಿದೆ.
ಕೆಲವು ಹದಿಹರೆಯದ ಕನ್ಯತ್ವವೂರ್ವದ ಬಾಲಕಿಯರನ್ನೂ ತಾವು ಲೈಂಗಿಕತೆಗಾಗಿ ಮಾರಿದ್ದಾಗಿ ಗ್ಯಾಂಗಿಗೆ ಸೇರಿದ ವ್ಯಕ್ತಿ ಬಾಲಕಿಯರನ್ನು ಮಾರುವ ಸಂದರ್ಭದಲ್ಲಿ ಬಡಾಯಿ ಕೊಚ್ಚಿಕೊಂಡಿದ್ದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ.
ಮಕ್ಕಳ ವಿರುದ್ಧ ಕ್ರೌರ್ಯ ತಡೆಯುವ ಬ್ರಿಟನ್ನಿನ ರಾಷ್ಟ್ರೀಯ ಸಮಾಜದ ವಕ್ತಾರ ಈ ಕುರಿತು ಮಾತನಾಡುತ್ತಾ, ಬ್ರಿಟನ್ನಲ್ಲಿ ಮಕ್ಕಳ ಕಳ್ಳಸಾಗಣೆದಾರರು ಸುಲಭ ಭೇದ್ಯ ಮಕ್ಕಳನ್ನು ಲೈಂಗಿಕ ವ್ಯಾಪಾರಕ್ಕೆ ಬಲವಂತವಾಗಿ ತಳ್ಳುತ್ತಿದ್ದು, ಅನೇಕ ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ ಎಸಗಿದ್ದಾರೆಂದು ಆರೋಪಿಸಿದ್ದಾರೆ.