ಇಸ್ಲಾಮಾಬಾದ್, ಬುಧವಾರ, 21 ಅಕ್ಟೋಬರ್ 2009( 11:22 IST )
ಯಾವುದೇ ಸನ್ನಿಹಿತವಾದ ಭಯೋತ್ಪಾದನೆ ದಾಳಿಗಳ ಬಗ್ಗೆ ನಮ್ಮ ಜತೆ ಮಾಹಿತಿ ಹಂಚಿಕೊಂಡರೆ ನಾವು ಅದನ್ನು ನೋಡಿಕೊಳ್ಳುತ್ತೇವೆ ಎಂದು ಪಾಕಿಸ್ತಾನ ಮಂಗಳವಾರ ಭಾರತಕ್ಕೆ ತಿಳಿಸಿದೆ. ಭಾರತಕ್ಕೆ ಭಯೋತ್ಪಾದನೆ ದಾಳಿಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿದರೂ ಅದನ್ನು ನಮಗೆ ತಿಳಿಸಬೇಕು.
ಭಾರತೀಯ ನಾಯಕರು ಈ ಕುರಿತು ಸಾರ್ವಜನಿಕರಿಗೆ ಈ ಕುರಿತು ಹೇಳಿಕೆಗಳನ್ನು ನೀಡುತ್ತಾರೆಯೇ ಹೊರತು ನಮ್ಮ ಜತೆ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ. ಆದ್ದರಿಂದ ಭಯೋತ್ಪಾದನೆ ದಾಳಿಯ ಸಾಧ್ಯತೆಯನ್ನು ನಿಭಾಯಿಸಲು ಅವರ ನಮ್ಮ ಜತೆ ಮಾಹಿತಿ ಹಂಚಿಕೊಳ್ಳುವುದು ಅವಶ್ಯಕವೆಂದು ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಸೀತ್ ತಿಳಿಸಿದ್ದಾರೆ.
ಅವರು ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡುವ ಬದಲಿಗೆ ಮುಂದೆ ಬಂದು ಪಾಕಿಸ್ತಾನದ ಜತೆ ಸಹಕರಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಮುಂಚಿತವಾಗಿ ದಿನದಾರಂಭದಲ್ಲಿ ನವದೆಹಲಿಯ ರಕ್ಷಣಾ ಸೇವೆಗಳ ಉನ್ನತ ಕಮಾಂಡರ್‌ಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಷ್ಟ್ರದ ಮೇಲೆ ಸನ್ನಿಹಿತ ದಾಳಿಗಳ ಬಗ್ಗೆ ನಿಯಮಿತ ಗುಪ್ತಚರ ಮಾಹಿತಿಗಳು ಬರುತ್ತಿವೆ. ಇದೊಂದು ತೀವ್ರ ಕಳವಳಪಡುವ ವಿಚಾರವಾಗಿದೆಯೆಂದು ಹೇಳಿದ್ದರು.