ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿಖ್ ಅಧಿಕಾರಿಗೆ ಪೇಟ, ಗಡ್ಡ: ಅಮೆರಿಕ ಒಪ್ಪಿಗೆ (Washington | Sikhs | Turbans | US government)
Feedback Print Bookmark and Share
 
ಸಿಖ್ ಜನಾಂಗಕ್ಕೆ ಸೇರಿದ ಫೆಡರಲ್ ಭದ್ರತಾ ಅಧಿಕಾರಿಗಳು ತಮ್ಮ ಪೇಟಗಳೊಂದಿಗೆ ಮತ್ತು ಗಡ್ಢಧಾರಿಗಳಾಗಿ ಸೇವೆ ಸಲ್ಲಿಸಲು ಅಮೆರಿಕ ಸರ್ಕಾರವು ಅವಕಾಶ ನೀಡಿದ್ದು, ಸಿಖ್ ಜನಾಂಗಕ್ಕೆ ನಾಗರಿಕ ಹಕ್ಕುಗಳಲ್ಲಿ ಮಹತ್ವದ ಜಯ ಲಭಿಸಿದಂತಾಗಿದೆ.

ಸಿಖ್ ಭದ್ರತಾ ಅಧಿಕಾರಿಯೊಬ್ಬರಿಗೆ ಪೇಟ ಮತ್ತು ಗಡ್ಢಧಾರಿಯಾಗಿ ಕೆಲಸ ನಿರ್ವಹಿಸಬಾರದೆಂದು ಉನ್ನತ ಭದ್ರತಾ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಸಿಖ್ ಅಧಿಕಾರಿ ತಾರತಮ್ಯದ ಪ್ರಕರಣವನ್ನು ದಾಖಲಿಸಿದ ಬಳಿಕ ಈ ನಿಷೇಧವನ್ನು ಬದಲಿಸಿದ ತೀರ್ಪು ಬಂದಿದ್ದರಿಂದ ಸಿಖ್ ಹೋರಾಟಕ್ಕೆ ಜಯ ಸಿಕ್ಕಿದೆಯೆಂದು ಸಮುದಾಯ ಸಲಹಾ ಸಮ‌ೂಹವೊಂದು ತಿಳಿಸಿದೆ. ಸಿಖ್ ಜನಾಂಗದ ಧಾರ್ಮಿಕ ನಂಬಿಕೆಗಳಿಗೆ ಅವಕಾಶ ನೀಡಲು ಫೆಡರಲ್ ಕಾನೂನು ಜಾರಿ ಸಂಸ್ಥೆ ತನ್ನ ನೀತಿಯನ್ನು ಬದಲಿಸಿದ್ದು ಇದೇ ಮೊದಲಬಾರಿ ಎಂದು ಸಮುದಾಯ ಸಲಹಾ ಗುಂಪು ಹೇಳಿದೆ.

ಮೇಜರ್ ಗಿಲ್ ಎಂದೇ ಹೆಸರಾಗಿದ್ದ ರಘಬೀರ್ ಸಿಂಗ್ ಅವರು ನೀಡಿದ ದೂರಿನ ಆಧಾರದ ಮೇಲೆ ನಾಗರಿಕ ಹಕ್ಕುಗಳ ಪರ ವಕೀಲರ ಸಮಿತಿ ಮತ್ತು ಸಿಖ್ ಒಕ್ಕೂಟವು ಜಂಟಿಯಾಗಿ ದಾವೆ ಹೂಡಿತ್ತು. ಸುಮಾರು 34 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮೇಜರ್ ಗಿಲ್ ಅವರು 2004ರಲ್ಲಿ ತಮ್ಮ ಕುಟುಂಬದ ಜತೆ ಅಮೆರಿಕಕ್ಕೆ ತೆರಳಿ, ಎನ್‌ಸಿಎಲ್‌ಎನ್20 ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು.

ಆ ಕಂಪೆನಿಯ ಸರ್ಕಾರಿ ಗುತ್ತಿಗೆಯ ಮೇಲೆ ಫೆಡರಲ್ ರಕ್ಷಣಾ ಸೇವೆಯಲ್ಲಿ ಫ್ರೆಸ್ನೊದ ಫೆಡರಲ್ ಕಟ್ಟಡ ಭದ್ರತೆ ಸೇವೆಗೆ ಸೇರಿಕೊಂಡರು.ಆದರೆ, ಎಫ್‌ಪಿಎಸ್ ಸಮವಸ್ತ್ರ ಮತ್ತು ಅತಾರ್ಕಿಕ ನೀತಿಗಳಿಂದ ಮೇಜರ್ ಗಿಲ್ ಅವರು ಸಿಖ್ ಪೇಟ ಧರಿಸಲು ಅಥವಾ ಸಿಖ್ ಸಂಪ್ರದಾಯದ ರೀತ್ಯ ಗಡ್ಡಧಾರಿಯಾಗಲು ಅಡ್ಡಿಯಾಯಿತು. ಮೇಜರ್ ಗಿಲ್ ಅವರು 2005ರಲ್ಲಿ ಸಿಖ್ ಒಕ್ಕೂಟದ ನೆರವು ಯಾಚಿಸಿದ ಬಳಿಕ, ಎಫ್‌ಪಿಎಸ್ ತನ್ನ ಸಮವಸ್ತ್ರ ನೀತಿ ಮತ್ತು ಸಿಖ್ ನಂಬಿಕೆಗೆ ಅವಕಾಶ ನೀಡದ ನೀತಿಗಳನ್ನು ಬದಲಿಸುವಲ್ಲಿ ಯಶಸ್ವಿಯಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಖ್, ಪೇಟ, ಭದ್ರತಾ, ಮೇಜರ್ ಗಿಲ್